ಮುಲ್ಕಿ: ಮಾನಂಪಾಡಿ ಶ್ರೀ ಧೂಮಾವತಿ ಜಾರಂದಾಯ ಮತ್ತು ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.ಜ. 27 ಬೆಳಗ್ಗೆ ಚಪ್ಪರ ಮುಹೂರ್ತ ನಡೆದು ಭಂಡಾರ ಮನೆಯಿಂದ ಧರ್ಮದೈವಗಳ ದರ್ಶನದೊಂದಿಗೆ ಭಂಡಾರ ದೇವಸ್ಥಾನಕ್ಕೆ ಆಗಮಿಸಿತು ಬಳಿಕ ರಾತ್ರಿ ಮೈಸಂದಾಯ ನೇಮೋತ್ಸವ ಹಾಗೂ ಜಾರಂದಾಯ ನೇಮೋತ್ಸವ ಜ.28 ಗುರುವಾರ ರಾತ್ರಿ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ ವಿಜಂಭಣೆಯಿಂದ ರಾಘವೇಂದ್ರ ಭಟ್ ಮಾನಂಪಾಡಿ ರವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಅವರು ಮಾತನಾಡಿ ಕೊರೋನಾ ದಿಂದ ಈ ಬಾರಿ ಸರಳ ರೀತಿಯಲ್ಲಿ ನೇಮೋತ್ಸವ ನಡೆದಿದ್ದು ಭಕ್ತಾದಿಗಳು ಸಹಕಾರ ನೀಡಿದ್ದಾರೆ.ಮುಂದಿನ ದಿನಗಳಲ್ಲಿ ದೈವಸ್ಥಾನದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಆಶೀರ್ವಚನ ನೀಡಿದರು. ದೈವಸ್ಥಾನದ ಗುರಿಕಾರ ಕೃಷ್ಣಪ್ಪ ಸನಿಲ್ ಮಾತನಾಡಿ ಮುಲ್ಕಿ 9 ಮಾಗಣೆಯ ಕಾರಣಿಕ ದೈವಸ್ಥಾನಗಳಲ್ಲಿ ಒಂದಾದ ಶ್ರೀ ಧೂಮಾವತಿ ಜಾರಂದಾಯ ಮತ್ತು ಪರಿವಾರ ದೈವಗಳ ಸಾನಿಧ್ಯ ದಲ್ಲಿ ಸಂಭ್ರಮದ ನೇಮೋತ್ಸವ ನಡೆದಿದ್ದು ಅನ್ನಸಂತರ್ಪಣೆ ನಿರಾತಂಕವಾಗಿ ನಡೆದಿದೆ. ಭಕ್ತಾದಿಗಳ ಸಹಕಾರದ ಮೂಲಕ ನಾಳೆ (ಜ.29) ಮಾಯಂದಾಲ ನೇಮೋತ್ಸವ ಹಾಗೂ ಭಂಡಾರ ನಿರ್ಗಮಿಸಲಿದೆ ಎಂದರು. ಈ ಸಂದರ್ಭ ಮಾನಂಪಾಡಿ ಮೊಗವೀರ ಸಭಾ ಹೆಜಮಾಡಿಕೋಡಿ ಹತ್ತು ಸಮಸ್ತರು ಹಾಗೂ ಮಿತ್ರವೃಂದ ಮಾನಂಪಾಡಿ ಮಹಿಳಾ ಮಂಡಳಿ ಮಾನಂಪಾಡಿ ಸದಸ್ಯರು ಉಪಸ್ಥಿತರಿದ್ದರು.
Kshetra Samachara
29/01/2021 11:30 am