ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬೆಳ್ಳಾಯರು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಜಾತ್ರೋತ್ಸವ ಸಂಭ್ರಮ

ಮುಲ್ಕಿ: ಮುಲ್ಕಿ ಸಮೀಪದ ಬೆಳ್ಳಾಯರು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಪುಣ್ಯಾಹ, ಪಂಚಗವ್ಯ 4 ಕಾಯಿ ಗಣಹೋಮ, ಕಲಶಾಧಿವಾಸ ಹೋಮ, 25 ಕಲಶ ಪ್ರತಿಷ್ಠೆ, ಪರಿವಾರ ದೇವತಾ ಕಲಶ ಪ್ರತಿಷ್ಠೆ ನಡೆಯಿತು.

ಬೆಳಗ್ಗೆ 11 ಗಂಟೆಗೆ ಶ್ರೀ ದೇವರಿಗೆ ಕಲಶಾಭಿಷೇಕ ತುಲಾಭಾರ ಸೇವೆ, ಮಹಾಪೂಜೆ ಹಾಗೂ ಪಲ್ಲಪೂಜೆ ನಡೆದು ಮಹಾ ಅನ್ನ ಸಂತರ್ಪಣೆ ನಡೆಯಿತು.

7 ಗಂಟೆಗೆ ರಂಗಪೂಜೆ, ಬಳಿಕ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ರಾಜಾಂಗಣ ಪ್ರಸಾದ ವಿತರಣೆ ದೇರೆಬೈಲು ಶಿವಪ್ರಸಾದ ತಂತ್ರಿಗಳ ನೇತೃತ್ವದಲ್ಲಿ ಅರ್ಚಕ ಗಣೇಶ್ ಭಟ್ ಹಾಗೂ ದೇವಳದ ಆಡಳಿತ ಮೊಕ್ತೇಸರ ಪಾದೆ ಮನೆ ಜಯಂತ ರೈ ಸಹಕಾರದಲ್ಲಿ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ನೃತ್ಯ ಭಜನೆ ನಡೆಯಿತು. ಈ ಸಂದರ್ಭ ದೇವಳದ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ ಮಾತನಾಡಿ, ಕೊರೊನಾದಿಂದಾಗಿ ಈ ಬಾರಿಯ ಉತ್ಸವ ಸರಳ ರೀತಿಯಲ್ಲಿ ನಡೆದಿದ್ದು, ದೇವಳದ ಉತ್ಸವಕ್ಕೆ ಸಹಕರಿಸಿದ ಎಲ್ಲ ಅಧಿಕಾರಿ ವರ್ಗ ಹಾಗೂ ಭಕ್ತರಿಗೆ ಧನ್ಯವಾದ ಅರ್ಪಿಸಿದರು.

ದೇವಳದ ಗೌರವಾಧ್ಯಕ್ಷ ಟಿ.ಭಾಸ್ಕರ ಶೆಟ್ಟಿ ತೋಕೂರುಗುತ್ತು, ಮೊಕ್ತೇಸರ ಶೇಖರ ಟಿ. ಶೆಟ್ಟಿ, ಕಾರ್ಯದರ್ಶಿ ಬಿ. ಅನಂತರಾಮ ರಾವ್, ಕೋಶಾಧಿಕಾರಿ ಬಿ. ರತ್ನಾಕರ ಶೆಟ್ಟಿಗಾರ್, ಜಂಟಿ ಕೋಶಾಧಿಕಾರಿ ಬಿ.ಕೃಷ್ಣ ರಾವ್ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

28/01/2021 02:20 pm

Cinque Terre

8.66 K

Cinque Terre

0

ಸಂಬಂಧಿತ ಸುದ್ದಿ