ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಗಂಟಾಲ್ಕಟ್ಟೆ ಮನೆಯೊಂದರಲ್ಲಿ ನಡೆದ ಸ್ವಾಮಿ ಕೊರಗಜ್ಜ ದೈವಾರಾಧನೆ ಸಂದರ್ಭ ಮುಸ್ಲಿಂ ಮಹಿಳೆಯೊಬ್ಬರಿಗೆ ಆವೇಶ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ವೈರಲ್ ಆಗುತ್ತಿದೆ.
ಗಂಟಾಲ್ಕಟ್ಟೆ ಮನೆಯೊಂದರ ಶ್ರೀ ಕೊರಗಜ್ಜನ ಗುಡಿಯಲ್ಲಿ ನೇಮೋತ್ಸವ ಭಾನುವಾರ ನಡೆದಿದ್ದು, ಈ ವೇಳೆ ಮಧ್ಯ ವಯಸ್ಕ ಮಹಿಳೆಗೆ ಆವೇಶ ಬಂದಿದೆ!
ಆವೇಶದ ಸಂದರ್ಭದಲ್ಲಿ ಮಹಿಳೆ ತುಳುವಿನಲ್ಲಿ ಮಾತನಾಡಿದ್ದು, ಅಸ್ಪಷ್ಟವಾಗಿ ಕೇಳುತ್ತಿದೆ. ಒಬ್ಬ ಸಹೋದರ ವಿದೇಶದಲ್ಲಿರುವ ಬಗ್ಗೆ ಆವೇಶಭರಿತ ಮಹಿಳೆ ಹೇಳುತ್ತಿರುವ ಮಾತು ಈ ವೀಡಿಯೊದಲ್ಲಿದೆ.
Kshetra Samachara
02/02/2021 10:43 am