ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಷಷ್ಠಿ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ರಥೋತ್ಸವ ನಡೆಯಿತು.
ಸೋಮವಾರ ಬೆಳಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ ನಡೆಯಿತು. ರಾತ್ರಿ ಓಕುಳಿ ನಡೆದು ಕೆರೆಕಟ್ಟೆ ದೀಪೋತ್ಸವ ನಡೆಯಿತು. ದೇವಳ ಸಮೀಪದ ಕೆರೆ ಬದಿಯ ಮಂಟಪದಲ್ಲಿ ದೇವರನ್ನು ಕುಳ್ಳಿರಿಸಿ ವಿಶೇಷ ಪೂಜೆ ನಡೆಯಿತು. ಬಳಿಕ ದೇವರು ಪಲ್ಲಕ್ಕಿ ಮೂಲಕ ದೇವಳದ ಎದುರಿನ ಬಾಕಿಮಾರು ಗದ್ದೆಗೆ ತಲುಪಿ ವಿಶೇಷ ಬಲಿ ಉತ್ಸವದ ಮೂಲಕ ಸಂಭ್ರಮದ ರಾತ್ರಿ ರಥೋತ್ಸವ ನಡೆಯಿತು. ಬಳಿಕ ದೇವರು ಕಟ್ಟೆ ಪೂಜೆಗಾಗಿ ಬೆಳ್ಳಾಯರು ಕೆರೆಕಾಡು ತೆರಳಿ ಅವಭೃತ ಜಳಕದ ಬಲಿ ರಥಾವರೋಹಣ , ಮಹಾಪೂಜೆ ನಡೆಯಿತು.
ದೇವಳ ತಂತ್ರಿಗಳಾದ ಗೋಪಾಲ ಕೃಷ್ಣ ತಂತ್ರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರಿದಾಸ್ ಭಟ್ ತೋಕೂರು, ವೆಂಕಟೇಶ ಭಟ್ ಪಾವಂಜೆ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಅನಂತ ರಾಮ ಭಟ್, ತೋಕೂರು ಫೇಮಸ್ ಯೂತ್ ಕ್ಲಬ್ ಅಧ್ಯಕ್ಷ ಭಾಸ್ಕರ್ ಸಾಲ್ಯಾನ್,
ದೀಪಕ್ ತೋಕೂರು, ವಿಶ್ವನಾಥ ರಾವ್ ಪುನರೂರು,ಗೋಪಿನಾಥ ರಾವ್, ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
22/12/2020 11:04 am