ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ಕೃಷ್ಣ ಮಠದಲ್ಲಿ ಕನ್ನಡ ಮಾಯ! :ಮಹಾದ್ವಾರ ಫಲಕದಲ್ಲಿ ತುಳು, ಸಂಸ್ಕೃತ ವಿರಾಜಮಾನ!

ಉಡುಪಿ: ಕನ್ನಡ ನಾಡು-ನುಡಿ ಬಗ್ಗೆ ಚರ್ಚೆ ನಡೆಯುತ್ತಲೇ ಇವೆ. ಇಂತಹ ಹೊತ್ತಲ್ಲೇ ಶ್ರೀ ಕೃಷ್ಣ ಮಠದಲ್ಲಿ ಕನ್ನಡ ಮಾಯವಾಗಿದ್ದು, ಉಡುಪಿ ಜನತೆಯ ಅಚ್ಚರಿಗೆ ಕಾರಣವಾಗಿದೆ.

ಶ್ರೀ ಕೃಷ್ಣಮಠದ

ಮಹಾದ್ವಾರದ ಫಲಕದಲ್ಲಿ ಕಳೆದೆರಡು ದಿನಗಳಿಂದ ಕನ್ನಡ ಮಾಯವಾದ ಬಗ್ಗೆ ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದೇ ಹೊತ್ತಿಗೆ ಶ್ರೀ ಕೃಷ್ಣ ಮಠ, ರಜತಪೀಠ ಪುರಂ ಎಂದು ತುಳು ಮತ್ತು ಸಂಸ್ಕೃತದಲ್ಲಿ ಬರೆದಿರುವ ಫಲಕಗಳು ಪ್ರತ್ಯಕ್ಷಗೊಂಡಿವೆ. ಗಮನಾರ್ಹ ಸಂಗತಿ ಎಂದರೆ

ಈ ವರೆಗೆ ಕನ್ನಡ ಫಲಕವೇ ಇತ್ತು. ಅದರಲ್ಲಿ

ಕೃಷ್ಣಮಠ ಎಂದು ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಬರೆಯಲಾಗಿತ್ತು.

ಆದರೆ ಪರ್ಯಾಯ ಅದಮಾರು ಮಠದವರು ಫಲಕ ಬದಲಾವಣೆ ಮಾಡಿ ಹೊಸ ಫಲಕದಲ್ಲಿ ತುಳು ಹಾಗೂ ಸಂಸ್ಕೃತದಲ್ಲಿ ಬರೆಸಿದ್ದಾರೆ.

ಕನ್ನಡ ಭಾಷೆ ಯಾಕಿಲ್ಲ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

Edited By : Nagaraj Tulugeri
Kshetra Samachara

Kshetra Samachara

01/12/2020 11:24 am

Cinque Terre

23.65 K

Cinque Terre

14

ಸಂಬಂಧಿತ ಸುದ್ದಿ