ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪೆರಾರ ದೇಗುಲ ಆಡಳಿತಾಧಿಕಾರಿಯಿಂದ ಕರ್ತವ್ಯ ಲೋಪ: ತುಳುನಾಡ ರಕ್ಷಣಾ ವೇದಿಕೆ

ಮಂಗಳೂರು: ಧರ್ಮಸ್ಥಾನ ಶ್ರೀ ಕ್ಷೇತ್ರ ಪೆರಾರದ ಬ್ರಹ್ಮದೇವರು ಇಷ್ಟ ದೇವತಾ ಬಲವಂಡಿ ವ್ಯಾಘ್ರಚಾಮುಂಡಿ ದೇವ-ದೈವಸ್ಥಾನದ ಆಡಳಿತಾಧಿಕಾರಿ ಕ್ಷೇತ್ರ ವಿರೋಧಿ ಕ್ರಮ ಅನುಸರಿಸುತ್ತಿದ್ದಾರೆ ಎಂದು ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಆರೋಪಿಸಿದ್ದಾರೆ.

ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಆದೇಶದಂತೆ ದೈವಸ್ಥಾನ ಆಡಳಿತಾಧಿಕಾರಿಯಾಗಿದ್ದ ಪಿಡಿಒ ಬದಲಿಸಬೇಕೆಂದು ವೇದಿಕೆ ಆಗ್ರಹಿಸಿದೆ.ಆ ಹುದ್ದೆಗೆ ಮಂಗಳೂರು ತಾಲೂಕು ಗುರುಪುರ ನಾಡಕಚೇರಿಕಯ ಉಪ ತಹಶೀಲ್ದಾರ್ ರನ್ನು ಮುಂದಿನ ಆರು ತಿಂಗಳ ಅವಧಿಗೆ ಅಥವಾ ವ್ಯವಸ್ಥಾಪನಾ ಸಮಿತಿ ರಚನೆ ಆಗುವವರೆಗೆ ಯಾವುದು ಮೊದಲೋ ಅಲ್ಲಿವರೆಗೆ ಹೆಚ್ಚುವರಿ ಪ್ರಭಾವದಲ್ಲಿರಬೇಕೆಂದು ಆದೇಶ ನೀಡಿದ್ದರು. ಆದರೆ, ಪೆರಾರ ಸೇವಾ ಸಮಿತಿ

ಆಡಳಿತಾಧಿಕಾರಿ ಕರ್ತವ್ಯ ಲೋಪ ಎಸಗಿ ದೇಗುಲದ ಹಣ ದುರುಪಯೋಗಪಡಿಸಿ ದೇವಾಲಯಕ್ಕೆ ನಷ್ಟ ಉಂಟು ಮಾಡಲು‌ ಕಾರಣರಾಗಿದ್ದಾರೆ.

ಇವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರೂ ಈವರೆಗೆ ಕ್ರಮ ಕೈಗೊಂಡಿಲ್ಲ. ಇನ್ನು ಸಿಸಿ ಟಿವಿ ಫೂಟೇಜ್ ಪರಿಶೀಲಿಸಿದಾಗ ಕಾಣಿಕೆ ಹುಂಡಿ ಹಣ ಎಣಿಸುವ ವೇಳೆ ಸರ್ಕಾರಿ ಅಧಿಕಾರಿ ಹಾಗೂ ನೌಕರರಲ್ಲದೆ ಇತರ ಖಾಸಗಿ ವ್ಯಕ್ತಿಗಳೂ ಹಣ ಎಣಿಕೆ ಮಾಡಿರುವುದು ಕಂಡು ಬಂದಿದೆ. ಹುಂಡಿ ಹಣ ಎಣಿಕೆ ಮಾಡುವ 7 ದಿನಗಳ ಮುಂಚಿತವಾಗಿ ಎಣಿಕೆ ಬಗ್ಗೆ ದೇವಾಲಯಗಳಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಆದರೆ ಆಡಳಿತಾಧಿಕಾರಿಯವರು ಪ್ರಕಟಣೆ ಕೂಡ ನೀಡಿಲ್ಲ. ದೇವಾಲಯ ಪ್ರವರ್ಗ ಎ ದೇವಾಲಯವಾಗಿರುವುದರಿಂದ ಈ ಕುರಿತು ಪರೀಶೀಲಿಸಿ ಆಡಳಿತಾಧಿಕಾರಿಯನ್ನು ಬದಲಿಸಿ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಆಡಳಿತಾಧಿಕಾರಿಯನ್ನು ನೇಮಿಸಲು ಕ್ರಮ ಕೈಗೊಳ್ಳಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

13/11/2020 11:04 am

Cinque Terre

15.02 K

Cinque Terre

3

ಸಂಬಂಧಿತ ಸುದ್ದಿ