ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಚ್ಚಿಲ: ಆಯುಧ ಪೂಜೆ ಸಡಗರ: ಕುಂಜೂರು ಶ್ರೀ ದುರ್ಗಾ ದೇವಸ್ಥಾನ ಮುಂಭಾಗ ಸಾಲಂಕೃತ ವಾಹನಗಳು

ವರದಿ : ಶಫೀ ಉಚ್ಚಿಲ

ಉಚ್ಚಿಲ: ನವರಾತ್ರಿ ಕೊನೆ ದಿನವಾದ ವಿಜಯದಶಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವವಿದ್ದು, ಎಲ್ಲೆಡೆ‌ ಆಯುಧ, ಯಂತ್ರಗಳಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಅದರಲ್ಲೂ ವಾಹನಗಳಿಗೆ ಪೂಜೆ ಸಲ್ಲಿಸುವುದೇ ಒಂದು ಸಂಭ್ರಮವಾಗಿದ್ದು, ಭಾನುವಾರ ಕಾಪು ತಾಲೂಕಿನ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳು, ಘನ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ವಾಹನದ ಮಾಲೀಕರು ವಾಡಿಕೆಯಂತೆ ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಿ, ಹೂವುಗಳಿಂದ ಶೃಂಗರಿಸಿ, ಕುಂಕುಮ, ಅರಿಶಿಣ ಹಚ್ಚಿ, ನಿಂಬೆ ಹಣ್ಣು, ಕಾಯಿ ಇಟ್ಟು ಪೂಜೆಗೆ ಸಜ್ಜುಗೊಳಿಸಿದ್ದರು. ಮದುವಣಗಿತ್ತಿಯಂತೆಯೇ ಸಿಂಗರಿಸಿಕೊಂಡ ವಾಹನಗಳಿಗೆ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಚಕ್ರಪಾಣಿ ಉಡುಪ ಅವರು ಸಂಪ್ರದಾಯ ಬದ್ಧವಾಗಿ ಪೂಜಾ ವಿಧಿವಿಧಾನ ನೆರವೇರಿಸಿದರು.

Edited By : Manjunath H D
Kshetra Samachara

Kshetra Samachara

25/10/2020 03:24 pm

Cinque Terre

18.01 K

Cinque Terre

0

ಸಂಬಂಧಿತ ಸುದ್ದಿ