ಮುಲ್ಕಿ: ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರದೇವತೆ ಚಾಮುಂಡೇಶ್ವರಿ ಗುಳಿಗ ಸನ್ನಿಧಿ ಉಲ್ಲಂಜೆ ಕ್ಷೇತ್ರಕ್ಕೆ ನವರಾತ್ರಿಯ ಪುಣ್ಯದಿನದಂದು ಶ್ರೀ ಕಾಳಿ ಚರಣ್ ಮಹಾರಾಜ್ ಭೇಟಿ ನೀಡಿದರು. "ದೇವರ ಸಂಕೀರ್ತನೆ ಹಾಡುವುದರಿಂದ ಶ್ರೀ ದೇವರನ್ನು ಸಾಕ್ಷಾತ್ಕರಿಸಬಹುದು. ಗ್ರಾಮೀಣ ಪ್ರದೇಶದಲ್ಲಿನ ದೈವಸ್ಥಾನ, ದೇವಾಲಯಗಳು ಭಕ್ತಿಯ ಲೋಕವನ್ನೇ ತೆರೆಯುವಲ್ಲಿ ಸಹಕಾರಿ" ಎಂಬ ಸಂದೇಶ ನೀಡಿದರು.
ಧರ್ಮದರ್ಶಿ ಹರೀಶ್ ಪೂಜಾರಿ ಸ್ವಾಗತಿಸಿದರು. ಉದ್ಯಮಿ ಪ್ರತೀಕ್ ಶೆಟ್ಟಿ ,ವಸಂತ ಪೂಜಾರಿ, ಶೇಖರ್ ಮೂಡಬಿದ್ರೆ, ಗಾಯಕ ಪ್ರಕಾಶ್ ಕಿನ್ನಿಗೋಳಿ, ನಿತಿನ್ ಉಲ್ಲಂಜೆ ಸುಮಿತ್ ಕುಮಾರ್, ಗುರುಪ್ರಸಾದ್ , ನಿಖಿಲ್ , ಕೇಶವ, ಮನೀಶ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಕಿನ್ನಿಗೋಳಿಯಲ್ಲಿ ಐದನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ಶ್ರೀ ಶಾರದಾ ದೇವಿ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಶ್ರೀ ಕಾಳಿಚರಣ್ ಮಹಾರಾಜ್ ಭಾಗವಹಿಸಿದರು.
ಶ್ರೀ ರಾಮ ಮಂದಿರದ ಅರ್ಚಕ ಗಿರೀಶ್ ಭಟ್, ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಸಮಿತಿಯ ಸುಬ್ರಹ್ಮಣ್ಯ ಶೆಣೈ, ಗಣೇಶ್ ಕಿನ್ನಿಗೋಳಿ, ಕೃಷ್ಣ ಶೆಣೈ, ಗೋಪಾಲ ಮೂಲ್ಯ, ಕೇಶವ, ವಿಶ್ವನಾಥ್ ಮುಕ್ಕ, ರಾಧಾ ಶೆಣೈ, ಪೂರ್ಣಿಮಾ ರಾಧಾಕೃಷ್ಣ ಉಡುಪ, ಶಶಿಕಲಾ ಕೆಮ್ಮಡೆ, ಪ್ರೇಮರಾಜ್ ಶೆಟ್ಟಿ, ನವೀನ್ ಪೂಜಾರಿ, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
23/10/2020 11:33 am