ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಸಾವಿರಕಂಬದ ಬಸದಿಗೆ(ತ್ರಿಭುವನ ತಿಲಕ ಚೂಡಾಮಣಿ ಬಸದಿ) ಶಿವ ತಾಂಡವ ಸ್ತೋತ್ರ ಖ್ಯಾತಿಯ ಕಾಳಿ ಚರಣ್ ಮಹಾರಾಜ್ ಸ್ವಾಮೀಜಿಯವರು ಭಾನುವಾರ ಭೇಟಿ ನೀಡಿ, ಬಸದಿಯ ವಾಸ್ತು ಶಿಲ್ಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಸದಿಯ ಚಂದ್ರನಾಥ ಸ್ವಾಮಿ, ಕ್ಷೇತ್ರಪಾಲ ದೇವರ, ನಾಗಲಯದ ದರ್ಶನ ಪಡೆದರು.
ಪುರಸಭೆ ಸದಸ್ಯ ಪ್ರಸಾದ್ ಕುಮಾರ್, ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ, ಉದ್ಯಮಿ ಪ್ರತೀಕ್ ಶೆಟ್ಟಿ ಎಕ್ಕಾರು, ಅಭಿಲಾಷ್, ಕಿಶೋರ್, ರಂಜಿತ್ ಪೂಜಾರಿ, ಹರೀಶ್ ಎಂ.ಕೆ, ನಾಗವರ್ಮ ಜೈನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/10/2020 06:53 pm