ಮುಲ್ಕಿ:ಇಲ್ಲಿನ ಅಕ್ಕಸಾಲಿಗರ ಕೇರಿಯ ನಿವಾಸಿ ಸಾಮಾಜಿಕ ಕಾರ್ಯಕರ್ತ ನಾರಾಯಣ ಪೂಜಾರಿ ಎಂಬವರು ಸ್ವಯಂ ಪ್ರೇರಿತರಾಗಿ ರಸ್ತೆ ದುರಸ್ತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಕೆಲವು ವರ್ಷಗಳಿಂದ ನಾರಾಯಣ ಪೂಜಾರಿ ತಮ್ಮ ಸ್ವಂತ ಸೈಕಲ್ಲಿನಲ್ಲಿ ಕೆಂಪು ಕಲ್ಲಿನ ಮಣ್ಣನ್ನು ಮುಲ್ಕಿ ಒಳಪೇಟೆಯ ತಂದು ಹಾಗೂ ಹೆದ್ದಾರಿ ರಸ್ತೆಯ ಗುಂಡಿಗಳನ್ನು ಮುಚ್ಚಿದ್ದಾರೆ.
ರಸ್ತೆಯ ಗುಂಡಿಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿರುವ ನಾರಾಯಣ ಪೂಜಾರಿ ಸೇವಾ ಕಾರ್ಯವನ್ನು ನಾಗರಿಕರು ಹಾಗೂ ಆಟೋ ಚಾಲಕರು ಅಭಿನಂದಿಸಿದ್ದಾರೆ.
Kshetra Samachara
11/10/2022 12:18 pm