ಮೃತ ವೃದ್ಧೆಯ ಅಂತ್ಯಸಂಸ್ಕಾರ ನಡೆಸಲು, ಸಂಬಂಧಿಕರು ಅಸಹಾಯಕರಾಗಿದ್ದಾಗ ನಾಗರಿಕ ಸಮಿತಿಯ ಕಾರ್ಯಕರ್ತರೇ ಅಂತ್ಯಸಂಸ್ಕಾರ ನಡೆಸಿ ಮಾನವೀಯತೆ ಮೆರೆದಿರುವ ಪ್ರಸಂಗ ನಡೆದಿದೆ.
ಕಿನ್ನಿಮೂಲ್ಕಿಯಲ್ಲಿ ತಿಂಗಳ ಹಿಂದೆ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯೊಬ್ಬರು, ಗಂಭೀರ ಸ್ಥಿತಿಯಲ್ಲಿದ್ದರು.ಅವರನ್ನು ರಕ್ಷಿಸಿ ಸಮಾಜಸೇವಕ ನಿತ್ಯಾನಂದ ಒಳಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಗುಣಮುಖರಾದರೂ ವೃದ್ಧೆಯನ್ನು ಕರೆದ್ಯೊಯಲು ಸಂಬಂಧಿಕರು ಬಂದಿರಲಿಲ್ಲ. ವೃದ್ಧೆ ಆಸ್ಪತ್ರೆಯಲ್ಲೇ ದಿನಗಳ ಕಳೆಯುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಹೈಕೋರ್ಟ್ ನ್ಯಾಯಾಧೀಶರು ವೃದ್ಧೆಗೆ ಪುರ್ನವಸತಿ ಕಲ್ಪಿಸುವಂತೆ ಆದೇಶ ನೀಡಿದ್ದರು. ಆ ಬಳಿಕ ವೃದ್ಧೆಯನ್ನು ಉದ್ಯಾವರದ ಹಿರಿಯ ನಾಗರಿಕರ ಕನಸಿನ ಮನೆಯಲ್ಲಿ ದಾಖಲಿಸಲಾಗಿತ್ತು. ಕೆಲವು ದಿನಗಳಿಂದ ಕನಸಿನ ಮನೆಯಲ್ಲಿದ್ದ ವೃದ್ಧೆ ಮೃತಪಟ್ಟಿದ್ದರು. ಆಗ ಅಂತ್ಯಸಂಸ್ಕಾರ ನಡೆಸಲು ಯಾರು ಮುಂದಾಗದ ಕಾರಣ
ಕಾರ್ಯಕರ್ತರೇ ಅಂತ್ಯಸಂಸ್ಕಾರ ನಡೆಸಿ ಮಾನವೀಯತೆ ಮೆರೆದಿದ್ದಾರೆ..
PublicNext
23/09/2022 03:56 pm