ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ತ್ರಾಸಿ ಬೀಚ್ ಸ್ವಚ್ಛತೆ ಹಾಗೂ ನಾಮಫಲಕ ಅಳವಡಿಕೆ

ಬೈಂದೂರು: ಜನರು ಜೀವನೋಪಾಯಕ್ಕಾಗಿ ಸಾಗರವನ್ನು ಅವಲಂಬಿಸಿದ್ದಾರೆ. ಸಮುದ್ರದ ಸ್ವಚ್ಛತೆ ಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ದಕ್ಷಿಣ ಭಾರತ ಪ್ರವಾಸೋದ್ಯಮ ಮಂತ್ರಾಲಯ ಭಾರತ ಸರಕಾರ ರಿಜಿನಲ್ ಡೈರೆಕ್ಟರ್ ಮೊಹ್ಮದ್ ಫಾರೂಕ್ ಹೇಳಿದರು.

ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮತ್ತು ಬೀಚ್‌ನ ಸಚ್ಛತೆಯನ್ನು ಕಾಪಾಡಲು ಕಸದ ತೊಟ್ಟಿ ಮತ್ತು ಜನಾಗೃತಿಯ ಸಂದೇಶವುಳ್ಳ ಪಂಚಾಯಿತಿ ಬೋರ್ಡ್ ನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರು. ಈ ವೇಳೆ ಪ್ರವಾಸೋದ್ಯಮ ಸಚಿವಾಲಯ ಭಾರತ ಸರಕಾರದ ರಿಜಿನಲ್ ಡೈರೆಕ್ಟರ್ ಮಹಮ್ಮದ್ ಫಾರೂಕ್ ಮಾತನಾಡಿದರು.

ಭಾರತ ಸರಕಾರ ಮತ್ತು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ವತಿಯಿಂದ ಕುಂದಾಪುರ ತಾಲೂಕಿನ ತ್ರಾಸಿ ಬೀಚ್‌ನಲ್ಲಿ ಸ್ವಚ್ಛತೆ ಹಾಗೂ ನಾಮಫಲಕ ಅಳವಡಿಕೆ ಕಾರ್ಯಕ್ರಮ ನಡೆಯಿತು. ತ್ರಾಸಿ ಗ್ರಾಪಂ ಅಧ್ಯಕ್ಷೆ ಗೀತಾ ದೇವಾಡಿಗ. ತ್ರಾಸಿ ಗ್ರಾಮ ಪಂಚಾಯತ್ PDO ಶೋಭಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದು.

ಈ ಸಂದರ್ಭ ಮರವಂತೆ ಗ್ರಾಮ ನಾಗರಾಜ ಪಠಗಾರ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಸದಸ್ಯರಾದ ಭರತ್ ಬಂಗೇರ, ಅನುದೀಪ್ ಹೆಗ್ಡೆ ಮತ್ತು ವಿನುಸ, ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ವಿನಯ್. ಸಿಬ್ಬಂದಿ ದಿನೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/09/2022 09:31 am

Cinque Terre

2.93 K

Cinque Terre

0

ಸಂಬಂಧಿತ ಸುದ್ದಿ