ಮುಲ್ಕಿ: ಮಾಹಿತಿ ತಂತ್ರಜ್ಞಾನದ ಆಧುನಿಕತೆಯ ಕಾಲಘಟ್ಟದಲ್ಲಿ ಜನರಿಗೆ ಕೈಗೆಟಕುವ ರೀತಿಯಲ್ಲಿ ಸಾರ್ವಜನಿಕ ಸೇವೆಗಳು ದೊರಕಬೇಕು. ಈ ನಿಟ್ಟಿನಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಉಮನಾಥ ಕೋಟ್ಯಾನ್ ಹೇಳಿದ್ದಾರೆ.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನಿಂದ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ರೋಟರಿ ಶಾಲೆಯ ಹಳೇ ವಿದ್ಯಾರ್ಥಿಗಳಾದ ಶಯನ್ ವೈ ಶೆಟ್ಟಿ, ಹಾಗೂ ವಿವಿಯನ್ ಡೊನಾಲ್ಡ್ ಡೇಸಾರ ಸನ್ಮಾನ ಕಾರ್ಯಕ್ರಮ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರಿನ ಮೀಟರ್ ರೀಡಿಂಗ್‌ಗೆ ಕಂಪ್ಯೂಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಂಚಾಯತ್ ಮುಖ್ಯಾಧಿಕಾರಿ ಸಾಯಿಷ್ ಚೌಟ ಮಾತನಾಡಿ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಆರ್ಥಿಕ ಕ್ರೂಡಿಕರಣ ಸುಲಭಪಡಿಸುವ ಹಾಗೂ ಜನರಿಗೆ ಉಪಯೋಗವಾಗಿಸುವ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನದ ಮೂಲಕವಾಗಿ ಡಿಜಿಟಲ್ ಬಿಲ್ಲು ನೀಡುವ ಕೆಲಸ ಮಾಡಲಾಗುತ್ತಿದ್ದು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 3.5 ಲಕ್ಷ ದಿಂದ 4 ಲಕ್ಷ ರೂ. ನೀರಿನ ಶುಲ್ಕ ಸಂಗ್ರಹವಾಗುತ್ತಿದ್ದು, ಮುಂದಕ್ಕೆ ಡಿಜಿಟಲ್ ರೂಪದಲ್ಲಿ ಬಿಲ್ಲು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ರೋಟರಿ ಶಾಲೆಯ ಹಳೆವಿದ್ಯಾರ್ಥಿಗಳಾದ ಶಯನ್ ವೈ ಶೆಟ್ಟಿ, ಹಾಗೂ ವಿವಿಯನ್ ಡೊನಾಲ್ಡ್ ಡೇಸಾ ರವರನ್ನು ಗೌರವಿಸಲಾಯಿತು. ಬಿಜೆಪಿಯ ನಾಯಕರಾದ ಸುನೀಲ್ ಆಳ್ವ , ಈಶ್ವರ್ ಕಟೀಲು, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ದೇವ ಪ್ರಸಾದ್ ಪುನರೂರು, ಸ್ಟೇನಿ ಪಿಂಟೋ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ,ಕಿನ್ನಿಗೋಳಿ ರೋಟರಿ ಅಧ್ಯಕ್ಷ ಸ್ವರಾಜ್ ಶೆಟ್ಟಿ ,ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷೆ ಹಿಲ್ದಾ ಡಿಸೋಜ ಪಸ್ಥಿತರಿದ್ದರು.
Kshetra Samachara
19/03/2022 02:48 pm