ಮುಲ್ಕಿ:ಕಳೆದ ಮೂರುಗಳಲ್ಲಿ ವರ್ಷಗಳಲ್ಲಿ ಮೂಲ್ಕಿ ಮೂಡಬಿದ್ರೆಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆದಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗುವುದು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಕಿನ್ನಿಗೋಳಿ ಸಮೀಪದ ಕುಕ್ಕಟ್ಟೆಯಿಂದ ಕಿಲ್ಪಾಡಿ ಜಂಕ್ಷನ್ ವರೆಗೆ ಸುಮಾರು 3.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ಬಳ್ಕುಂಜೆ ಪಂಚಾಯತ್ ಅಧ್ಯಕ್ಷೆ ಮಮತಾ ಪೂಂಜ, ಉಪಾಧ್ಯಕ್ಷ ಆನಂದ ಕೊಲ್ಲೂರು, ಸುಜಾತ ಪ್ರಭಾಕರ್, ಶಾಂತ ಪೂಜಾರ್ತಿ, ನವೀನ್ ಶೆಟ್ಟಿ, ಗೀತಾ ಎಸ್, ಜಯಲಕ್ಷೀ ಮಾಜಿ ಅಧ್ಯಕ್ಷ ದಿನೇಶ್ ಪುತ್ರನ್, ಜಿಪಂ ಮಾಜಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಪಂ ಮಾಜಿ ಸದಸ್ಯೆ ರಶ್ಮೀ ಆಚಾರ್ಯ, ಶರತ್ ಕುಬೆವೂರು, ಐಕಳ ಪಂ. ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ದಿವಾಕರ ಚೌಟ, ದಿವಾಕರ ಪೂಂಜ, ದಯಾನಂದ ಭಟ್, ದೇವಾದಾಸ್ ಮಲ್ಯ, ವಾಸು ಪೂಜಾರಿ , ಮೋಹನ್, ಗಂಗಾಧರ್ ನಾಯ್ಕ, ಸುಧಾಕರ್ ಕೋಟ್ಯಾನ್, ಚೇತನ್, ಪ್ರಭಾಕರ್, ಗುತ್ತಿಗೆದಾರರಾದ ಅನೀಲ್ ಶೆಟ್ಟಿ, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
25/10/2021 11:03 am