ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪುಲ್ವಾಮಾ ದಾಳಿ ವೇಳೆ ಬಿಜೆಪಿಯ ಜವಾಬ್ದಾರಿಯುತ ಸ್ಥಾನದಲ್ಲಿದ್ದವ್ರು ಎಲ್ಲಿದ್ದರೆಂದು ಬಹಿರಂಗಪಡಿಸಲಿ; ಖಾದರ್ ಕಿಡಿ

ಮಂಗಳೂರು: ಮುಂಬೈಯಲ್ಲಿ ಬಾಂಬ್ ಬ್ಲಾಸ್ಟ್ ನಡೆದಾಗ ರಾಹುಲ್ ಗಾಂಧಿಯವರು ಎಲ್ಲಿದ್ದರು ಎಂದು ಕೇಳುವ ಬಿಜೆಪಿಗರು, ಪುಲ್ವಾಮಾ ದಾಳಿಯಾದಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಎಲ್ಲಿದ್ದರೆಂದು ಬಹಿರಂಗಪಡಿಸಲಿ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಗ್ರಹಿಸಿದರು.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಗಡಿಯಿಂದ 200ಕಿ.ಮೀ. ದೂರಕ್ಕೆ 250ಕೆಜಿ ಆರ್ ಡಿಎಕ್ಸ್ ಬಾಂಬ್ ಭಾರತೀಯ ಸೈನ್ಯದ ಎಲ್ಲಾ ಭದ್ರತೆಯನ್ನು ಮೀರಿ ಸೈನಿಕರಿದ್ದ ಬಸ್ ಬರುವ ಸಮಯಕ್ಕೆ ಸರಿಯಾಗಿ ಮುಟ್ಟಿರೋದು ಹೇಗೆ. ಯಾಕೆ ಇನ್ನೂ ಇದರ ತನಿಖೆ ನಡೆದಿಲ್ಲ. ಗುಪ್ತಚರ ಇಲಾಖೆ ಕೇಂದ್ರದ ಕೈಯಲ್ಲಿತ್ತಲ್ಲ. ಆಗ ಕೇಂದ್ರದ ಗೃಹಸಚಿವರು ಏನು ಮಾಡುತ್ತಿದ್ದರು. ಯಾಕೆ ಇನ್ನೂ ಇದರ ತನಿಖಾ ವರದಿ ಹೊರ ಬಿದ್ದಿಲ್ಲ. ಅದನ್ನು ಬಿಜೆಪಿಯವರು ಬಹಿರಂಗಪಡಿಸಲಿ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿ ಭಾರತ್ ಜೋಡೊ ರ್ಯಾಲಿ ಯಶಸ್ವಿಯನ್ನು ಕಂಡು ಸಹಿಸದ ಬಿಜೆಪಿ ಅಪಪ್ರಚಾರ ಮಾಡುವ ಯತ್ನವನ್ನು ಮಾಡಿದೆ. ಇವರು ಅಪಪ್ರಚಾರ ಮಾಡಿದಷ್ಟು ಜನರ ಪ್ರತಿಕ್ರಿಯೆ ಹೆಚ್ಚಾಗುತ್ತಿದೆ. ಇದರಿಂದ ಕಂಗೆಟ್ಟ ಬಿಜೆಪಿ ಪತ್ರಿಕೆಗೆ ಫೇಕ್ ನ್ಯೂಸ್ ನೀಡಿದೆ. ಇದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುತ್ತಿಲ್ಲ. ಯಾಕೆಂದರೆ ಈ ರ್ಯಾಲಿ ಪೂರ್ತಿಗೊಳ್ಳುವ ಸಂದರ್ಭ ದೇಶಕ್ಕೆ ಹೊಸ ನಾಯಕತ್ವವನ್ನು ರಾಹುಲ್ ಗಾಂಧಿ ಆಗುತ್ತಾರೆ ಸ್ಪಷ್ಟ ಸಂದೇಶ ದೊರಕಿದೆ ಎಂದು ಹೇಳಿದರು.

Edited By : Nagesh Gaonkar
PublicNext

PublicNext

09/10/2022 06:14 pm

Cinque Terre

62.8 K

Cinque Terre

12

ಸಂಬಂಧಿತ ಸುದ್ದಿ