ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಆರ್‌ಎಸ್‌ಎಸ್‌ ನಾಯಕರು ಮಸೀದಿಗೆ ಭೇಟಿ ಕೊಟ್ಟರೆ ಮನಪರಿವರ್ತನೆ ಆಗಲ್ಲ: ಪ್ರಮೋದ್ ಮುತಾಲಿಕ್

ಉಡುಪಿ: ಆರ್ ಎಸ್ ಎಸ್ ನಾಯಕರು ಮಸೀದಿಗೆ ಭೇಟಿ ಕೊಟ್ಟ ತಕ್ಷಣ ಮನಪರಿವರ್ತನೆ ಆಗುತ್ತದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಉಡುಪಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸ್ವಾತಂತ್ರ್ಯ ಸಿಕ್ಕಿದಾಗಲೇ ಮುಸಲ್ಮಾನರಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರೀಯತೆ ಬಿತ್ತಬೇಕಿತ್ತು. ತುಷ್ಠೀಕರಣ ಮಾಡಿ ಮಾಡಿ ಕಾಂಗ್ರೆಸ್ ಅವರನ್ನು ದಾರಿ ತಪ್ಪಿಸಿದ ಪರಿಣಾಮ ಇವತ್ತು ಎದುರಿಸುತ್ತಿದ್ದೇವೆ. ಭಯೋತ್ಪಾದನೆ, ಕೊಲೆ, ಗಲಭೆ ಕಾಂಗ್ರೆಸ್‌ ನ ತುಷ್ಠೀಕರಣದ ಕೊಡುಗೆ ಎಂದ ಅವರು ,ಮುಸ್ಲಿಮರಲ್ಲಿ ರಾಷ್ಟ್ರೀಯತೆ ಬೆಳೆಯುತ್ತದೆ ಎಂಬ ಶೇ. 99 ನಂಬಿಕೆ ನನ್ನಲ್ಲಿಲ್ಲ ಎಂದು ಹೇಳಿದ್ದಾರೆ.

ನಮ್ಮ ಶತ್ರು ಯಾರು ಮಿತ್ರ ಯಾರು ಎಂದು ಹಿಂದೂ ಸಮಾಜಕ್ಕೆ ಸ್ಪಷ್ಟ ಕಲ್ಪನೆ ಇಲ್ಲ .ಹಿಂದೂಗಳು ಸಾವಿರಾರು ವರ್ಷಗಳಿಂದ ಸೌಹಾರ್ದತೆಯಲ್ಲಿದ್ದೇವೆ. ಹಿಂದೂ ಸಮಾಜದಲ್ಲಿ ಆಕ್ರಮಣ ಮಾಡುವ ಮಾನಸಿಕತೆ ಇಲ್ಲ. ಮಸೀದಿ ಮದರಸಾಕ್ಕೆ ಹೋಗಿ ಮನವರಿಕೆ ಮಾಡುತ್ತೇವೆ ಎಂಬುದು ಅಸಾಧ್ಯದ ಮಾತು ಎಂದು ಹೇಳಿದ್ದಾರೆ.

'ಚಡ್ಡಿಗಳೇ ನಾವು ಮತ್ತೆ ಬರುತ್ತೇವೆ' ಎಂಬ ಪಿಎಫ್ ಐ ಗೋಡೆ ಬರಹ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,ಪಿ ಎಫ್ ಐ ಬ್ಯಾನ್- ಬಂಧನದಿಂದ ಇವರ ಆಟ ಮುಗಿಯೋದಿಲ್ಲ.ಪಿ ಎಫ್ ಐನ ಸಾವಿರಾರು ಕಮಿಟೆಡ್ ಕಾರ್ಯಕರ್ತರು ಇನ್ನೂ ಇದ್ದಾರೆ. ಕುತಂತ್ರ ಷಡ್ಯಂತ್ರ ದೇಶದ್ರೋಹಿ ಪ್ರವೃತ್ತಿ ಬ್ಯಾನ್ ನಿಂದ ತಡೆಯಲು ಸಾಧ್ಯವಿಲ್ಲ.ಪಿ ಎಫ್ ಐ ಪುಂಡಾಟಿಕೆಯ ಕಡಿವಾಣಕ್ಕೆ ಕೇಂದ್ರ, ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು.ಪೊಲೀಸ್ ಮತ್ತು ಗುಪ್ತಚರ ಇಲಾಖೆ ಅಲರ್ಟ್ ಆಗಬೇಕು. ಬಂಟ್ವಾಳದ ಬರಹ ಒಂದು ಎಚ್ಚರಿಕೆಯಾಗಿದೆ ಎಂದು ಹೇಳಿದ್ದಾರೆ.

Edited By : Nagesh Gaonkar
PublicNext

PublicNext

05/10/2022 07:37 pm

Cinque Terre

28.98 K

Cinque Terre

10

ಸಂಬಂಧಿತ ಸುದ್ದಿ