ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪರೇಶ್ ಮೇಸ್ತಾರನ್ನು ನೂರಕ್ಕೆ ನೂರು ಕೊಲೆ ಮಾಡಲಾಗಿದೆ: ಮರು ತನಿಖೆ ಆಗಬೇಕು: ಮುತಾಲಿಕ್!

ಉಡುಪಿ: ಕರಾವಳಿಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮತ್ತು ರಾಜಕೀಯ ಘರ್ಷಣೆಗೆ ಕಾರಣವಾಗಿದ್ದ ಪರೇಶ್ ಮೇಸ್ತ ಸಾವು , ಕೊಲೆಯಲ್ಲ ಆಕಸ್ಮಿಕ ಸಾವು ಎಂದು ಸಿಬಿಐ ವರದಿ ನೀಡಿದೆ. ಇದಕ್ಕೆ ಉಡುಪಿಯಲ್ಲಿ ತೀವ್ರ ಅಸಮಾಧಾನ ಹೊರಹಾಕಿರುವ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್, ಮೂರು ವರ್ಷಗಳ ನಂತರ ಸಿಬಿಐ, ಬಿ ರಿಪೋರ್ಟ್ ಹಾಕಿದೆ. ಅವರದ್ದು ಸಹಜ ಸಾವು ಅನ್ನೋದು ತಪ್ಪು. ಇದು ಅನ್ಯಾಯ.ನಾನು ಇದನ್ನು ಧಿಕ್ಕರಿಸುತ್ತೇನೆ.ಇದು ಅತ್ಯಂತ ಮೋಸ ಮಾಡಿದ ವರದಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪರೇಶ್ ಮೇಸ್ತ ಸಾವಿನ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದೆ. 2017ರಲ್ಲಿ ಪರೇಶ್ ಮೇಸ್ತ ಹತ್ಯೆಯಾಯಿತು.ಇಡೀ ರಾಜ್ಯಾದ್ಯಂತ ಹಿಂದೂಗಳ ಆಕ್ರೋಶ ಕಟ್ಟೆಯೊಡೆಯಿತು. ಗೃಹ ಸಚಿವ ಅಮಿತ್ ಶಾ ಕೂಡ ಅವರ ಮನೆಗೆ ಭೇಟಿ ಕೊಟ್ಟಿದ್ದರು. ಆ ಗಂಭೀರ ಪ್ರಕರಣವಾದಾಗ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದರು. ಪ್ರಕರಣವನ್ನು 2019ರಲ್ಲಿ ಸಿಬಿಐಗೆ ಒಪ್ಪಿಸಲಾಯಿತು.ಈಗಿನ ಕೇಂದ್ರ ಸರ್ಕಾರ ಕೇಸ್ ಅನ್ನು ರೀ ಓಪನ್ ಮಾಡಬೇಕು.ಸಂಪೂರ್ಣವಾಗಿ ಮರು ತನಿಖೆ ಮಾಡಬೇಕು.ಈ ವಿಷಯದಲ್ಲಿ ರಾಜ್ಯಾದ್ಯಂತ ಶ್ರೀರಾಮ ಸೇನೆ ಹೋರಾಟ ಮಾಡುತ್ತದೆ.ಇದು ಹಿಂದುತ್ವಕ್ಕೆ ಅನ್ಯಾಯ ಮಾಡಿದ ವರದಿ. ತಪ್ಪಿತಸ್ಥರು ಮುಸ್ಲಿಂ ಗೂಂಡಾ ಕಿಡಿಗೇಡಿಗಳು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

Edited By : Manjunath H D
PublicNext

PublicNext

04/10/2022 01:47 pm

Cinque Terre

46.03 K

Cinque Terre

2