ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಡಿ.23 - ಜ.1ರವರೆಗೆ ಕರಾವಳಿ ಉತ್ಸವ; ಸಚಿವ ಸುನಿಲ್ ಕುಮಾರ್

ಮಂಗಳೂರು: ನಗರದ ತಣ್ಣೀರುಬಾವಿಯ ಕಡಲತಡಿಯಲ್ಲಿ ಡಿ.23 - ಜ.1ರವರೆಗೆ ಕರಾವಳಿ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ. ಅದಕ್ಕೆ ಅಗತ್ಯವಿರುವ ಉಪ ಸಮಿತಿಗಳ ರಚನೆ ಹಾಗೂ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಅವರು, ಕರಾವಳಿ ಉತ್ಸವಕ್ಕೆ ಸರ್ಕಾರದ ಅನುದಾನ, ಖಾಸಗಿ ಪ್ರಾಯೋಜಕತ್ವ, ಮೆರವಣಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ, ಬೀಚ್ ಉತ್ಸವ, ರಿವರ್ ಫೆಸ್ಟಿವಲ್ ಆಯೋಜನೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ ಸಚಿವರು, ಕರಾವಳಿ ಉತ್ಸವವನ್ನು ಪ್ರಮುಖವಾಗಿ ಸಾಂಸ್ಕೃತಿಕವಾಗಿ ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾಗಿ ಆಯೋಜನೆ ಮಾಡಲಾಗುವುದು.‌ ಈ ಬಗ್ಗೆ ಉಪ ಸಮಿತಿಗಳಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು, ಈ ಉತ್ಸವ ಯಶಸ್ವಿಯಾಗಲು ಈ ಹಿಂದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಅನುಭವ ಹಾಗೂ ಸಲಹೆ ಅಗತ್ಯ, ಸಹಕರಿಸುವಂತೆ ಸಚಿವರು ಕೋರಿದರು.

ತಣ್ಣೀರು ಬಾವಿ ಕಡಲ ತೀರವನ್ನೇ ಪ್ರಧಾನ ವೇದಿಕೆಯನ್ನಾಗಿ ಕಾರ್ಯಕ್ರಮ ರೂಪಿಸಲಾಗುವುದು. ಅಲ್ಲಿಯೇ ಆಹಾರ ಮೇಳವನ್ನು ಆಯೋಜಿಸಲಾಗುವುದು, ಕದ್ರಿ ಪಾರ್ಕ್ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಲ್ಲಿ ಉಪ ವೇದಿಕೆಯಾಗಿ ಅವಕಾಶ ನೀಡಲಾಗುವುದು ಎಂದರು.

Edited By : Nirmala Aralikatti
Kshetra Samachara

Kshetra Samachara

03/10/2022 10:34 pm

Cinque Terre

13.59 K

Cinque Terre

0

ಸಂಬಂಧಿತ ಸುದ್ದಿ