ಮಂಗಳೂರು: ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜನ್ಮದಿನದಿಂದ ಮಹಾತ್ಮ ಗಾಂಧಿಜಿಯವರ ಜನ್ಮಜಯಂತಿಯವರೆಗೆ ಸೇವಾ ಪಾಕ್ಷಿಕದ ಪ್ರಯುಕ್ತ 15 ದಿನಗಳ ಕಾರ್ಯಕ್ರಮಗಳನ್ನು ಭಾಜಪಾ ಮಂಗಳೂರು ನಗರ ಉತ್ತರ ಮಂಡಲ ವತಿಯಿಂದ ನಡೆಯಿತು.
ಆ ಪ್ರಯುಕ್ತ ಮಹಾತ್ಮ ಗಾಂಧಿಜಿಯವರ ಜನ್ಮಜಯಂತಿಯಂದು ಅವರ ಸ್ವದೇಶಿ ಚಿಂತನೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವದೇಶಿ ಚಿಂತನೆಯ ಖಾದಿ ಉದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಶಾಸಕರಾದ ಡಾ. ಭರತ್ ಶೆಟ್ಟಿ, ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ಮಹಾ ಪೌರರಾದ ಜಯಾನಂದ್ ಅಂಚನ್ ಮತ್ತಿತರರು ಖಾದಿ ಭಂಡಾರಕ್ಕೆ ತೆರಳಿ ಖಾದಿ ಬಟ್ಟೆಗಳನ್ನು ಖರೀದಿಸಿ ಪ್ರೋತ್ಸಾಹಿಸಿದರು.
Kshetra Samachara
02/10/2022 07:02 pm