ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಪಿಸಿಸಿ.ವಕ್ತಾರರಾಗಿ ಭರತ್ ಮುಂಡೋಡಿ ಹಾಗೂ ಶೌವಾದ್ ಗೂನಡ್ಕ ನೇಮಕ

ಸುಳ್ಯ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರರ ಪಟ್ಟಿಯನ್ನು ಪುನರ್ರಚನೆ ಮಾಡಲಾಗಿದ್ದು ಸುಳ್ಯದ ಹಿರಿಯ ಕಾಂಗ್ರೆಸ್ ಮುಖಂಡ ಭರತ್ ಮುಂಡೋಡಿ ಹಾಗೂ ಯುವ ನಾಯಕ ಶೌವಾದ್ ಗೂನಡ್ಕ ಅವರು ವಕ್ತಾರರಾಗಿ ನೇಮಕಗೊಂಡಿದ್ದಾರೆ. ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಅನುಮೋದನೆಯೊಂದಿಗೆ ಕೆ.ಪಿ.ಸಿ.ಸಿ.ಮಾಧ್ಯಮ ಘಟಕದ ಅಧ್ಯಕ್ಷ ಪ್ರಿಯಾಂಕ್ ಖರ್ಗೆಯವರು ನೂತನ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಹಿರಿಯರಿಗೂ ಹಾಗೂ ಯುವಕರಿಗೂ ಪಟ್ಟಿಯಲ್ಲಿ ಪ್ರಾತಿನಿಧ್ಯವನ್ನು ನೀಡಲಾಗಿದೆ. ಈ ಹಿಂದೆ ಪ್ಯಾನಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭರತ್ ಮುಂಡೋಡಿ ಹಾಗೂ ಶೌವಾದ್ ಗೂನಡ್ಕ ಅವರನ್ನು ವಕ್ತಾರರಾಗಿ ನೇಮಕ ಮಾಡಲಾಗಿದೆ. ಭರತ್ ಮುಂಡೋಡಿ ಕೆಪಿಸಿಸಿ ಸದಸ್ಯರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದರು.

Edited By : Nirmala Aralikatti
Kshetra Samachara

Kshetra Samachara

25/09/2022 10:42 pm

Cinque Terre

3.76 K

Cinque Terre

0

ಸಂಬಂಧಿತ ಸುದ್ದಿ