ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು : NIA ಮತ್ತು EDಯನ್ನು ಕೇಂದ್ರ ಸರಕಾರ ಪಿಎಫ್ ಐ ಮೇಲೆ ಟೂಲ್ ಕಿಟ್ ನಂತೆ ಬಳಸುತ್ತಿದೆ : ಎಸ್.ಡಿ.ಪಿ.ಐ

ಪುತ್ತೂರು : ಕೇಂದ್ರ ಸರಕಾರ ಇಡಿ ಮತ್ತು ಎನ್.ಐ.ಎ ಯನ್ನು ಪಿಎಫ್ ಐ ಮತ್ತು ಎಸ್.ಡಿ.ಪಿ.ಯ ವಿರುದ್ಧ ಟೂಲ್ ಕಿಟ್ ನಂತೆ ಬಳಸುತ್ತಿದೆ ಎಂದು ಎಸ್.ಡಿ.ಪಿ.ಐ ದಕ್ಷಿಣಕನ್ನಡ ಜಿಲ್ಲಾ ಸಮಿತಿ ಸದಸ್ಯ ನವಾಝ್ ಬೆಳ್ತಂಗಡಿ ಆರೋಪಿಸಿದ್ದಾರೆ.

ಪಿಎಫ್ ಐ ಮತ್ತು ಎಸ್.ಡಿ.ಪಿ.ಐ ಮೇಲೆ ನಡೆದ ಎನ್.ಐ.ಎ ದಾಳಿ ಮತ್ತು ನಾಯಕರ ಬಂಧನವನ್ನು ಖಂಡಿಸಿ ಪುತ್ತೂರಿನ ದರ್ಬೆ ವೃತ್ತದ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರ ಎಷ್ಟೇ ಪ್ರಯತ್ನ ಪಟ್ಟರೂ, ಆರ್.ಎಸ್.ಎಸ್ ನ ಸಿದ್ಧಾಂತವನ್ನು ದೇಶದಲ್ಲಿ ಜಾರಿಗೆ ತರಲು ಪಿಎಫ್ ಐ, ಎಸ್.ಡಿ.ಪಿ.ಐ ಬಿಡುವುದಿಲ್ಲ. ಹಿಂದೆ ಯಾವ ರೀತಿ ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರ ಮೇಲೆ ದೌರ್ಜನ್ಯ ನಡೆಸುತ್ತಿದ್ದರೋ, ಅದೇ ರೀತಿಯಲ್ಲಿ ಇಂದು ಬಿಜೆಪಿ ಸರಕಾರ ಪಿಎಫ್ ಐ ಮತ್ತು ಅದರ ನಾಯಕರ ಮೇಲೆ ಮಾಡುತ್ತಿದೆ.

ಆದರೆ ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದ ಸ್ವಾತಂತ್ರ್ಯ ಹೋರಾಟಗಾರರಂತೆ ನಮ್ಮ ನಾಯಕರೂ ಹೋರಾಡಿ ಬಿಜೆಪಿ, ಸಂಘಪರಿವಾರದ ವಿರುದ್ಧ ಗೆಲ್ಲಲಿದ್ದಾರೆ ಎಂದರು. ಕೇಂದ್ರ ಸರಕಾರ ಇಡಿ ಮತ್ತು ಎನ್.ಐ.ಎ ಯಂಥಹ ತನಿಖಾ ಸಂಸ್ಥೆಗಳನ್ನು ಪಿಎಫ್ ಐ ಮೇಲೆ ಟೂಲ್ ಕಿಟ್ ನಂತೆ ಬಳಕೆ ಮಾಡುತ್ತಿದೆ ಎಂದು ಆರೋಪಿಸಿದ ಅವರು ಬಂಧಿಸಿದ ತಮ್ಮ ನಾಯಕರನ್ನೂ ತಕ್ಷಣವೇ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.

Edited By : Nagesh Gaonkar
Kshetra Samachara

Kshetra Samachara

24/09/2022 10:04 pm

Cinque Terre

13.66 K

Cinque Terre

4

ಸಂಬಂಧಿತ ಸುದ್ದಿ