ಮಂಗಳೂರು; ಪಿಎಫ್ ಐ ಮತ್ತು ಎಸ್ ಡಿಪಿಐ ಕಾರ್ಯಕರ್ತರ ಮೇಲೆ ಎನ್‌ಐಎ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ರು, ಅವ್ರು, ಸಮಾಜದಲ್ಲಿ ಅಶಾಂತಿ, ಭಯ, ಕೊಲೆ ಇವತ್ತು ಹೆಚ್ಚಾಗಿದೆ. ಈ ರೀತಿ ಭಯ ಹುಟ್ಟಿಸೋ ಕೆಲಸ ಯಾರೇ ಮಾಡಿದರೂ .ಸಾಕ್ಷಿ ಇದ್ದರೆ ತಾರತಮ್ಯ ಮಾಡದೇ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ಕಾನೂನು ಪಾಲಿಸುವಾಗ ಯಾವುದೇ ತಾರತಮ್ಯ ಬೇಡ.
ಸರ್ಕಾರ ಬಿಜೆಪಿ ಕೈಯ್ಯಲಿದೆ, ಸಾಕ್ಷಿ ಒದಗಿಸಿ ಕ್ರಮ ತೆಗೆದುಕೊಳ್ಳಲಿ. ಈ ದೇಶದಲ್ಲಿ ಕಾನೂನು ಇರುವಾಗ ಯಾರ ಕೇಸನ್ನೂ ಹಾಗೆ ತೆಗೆಯಲು ಆಗಲ್ಲ. ಗುಂಪು ಗಲಭೆ ಆದಾಗ ಕೆಲವರ ಮೇಲೆ ಕೇಸ್ ಆದಾಗ ವಾಪಾಸ್ ತೆಗೆಯಲು ಅವಕಾಶ ಇದೆ. ಸುಮ್ಮನೆ ಆರೋಪ ಮಾಡೋದು ಸರಿಯಲ್ಲ, ದಾಖಲೆ ತೋರಿಸಲಿ ಅಂದರು.
Kshetra Samachara
24/09/2022 05:43 pm