ಉಡುಪಿ: ಬಿಜೆಪಿ ಮತ್ತು ಬಿಜೆಪಿ ಸರಕಾರದ ಮಾನ ಮರ್ಯಾದೆಯನ್ನು ಬೀದಿ ಬೀದಿ..ಮನೆ ಮನೆಗೆ ಹೋಗಿ ತೆಗಿತೀನಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ,ಕಲಬುರ್ಗಿ ಗಣೇಶೋತ್ಸವಕ್ಕೆ ಪ್ರವೇಶ ನಿಷೇಧ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದು ಜಿಲ್ಲಾಧಿಕಾರಿಗಳ ಆಜ್ಞೆ ಅಲ್ಲ, ಇದು ಸರ್ಕಾರದ ಆಜ್ಞೆ, ಸರಕಾರ ಅಂದ್ರೆ ಬಿಜೆಪಿ.ಪದೇ ಪದೇ ನನಗೆ ನಿರ್ಬಂಧ ಹೇರುವುದು ಬಿಜೆಪಿಗೆ ಶೋಭೆ ತರುವುದಿಲ್ಲ.ನೀವು ತಡೆಯುತ್ತಿರುವುದು ಮುತಾಲಿಕ್ ನನ್ನು ಅಲ್ಲ, ಹಿಂದುತ್ವವನ್ನು.
ಹಿಂದುತ್ವದ ಶಕ್ತಿ ಸೇರುವ ಜಾಗಕ್ಕೆ ನಾಯಕನನ್ನು ತಡೆದು ದ್ರೋಹ ಮಾಡುತ್ತಿದ್ದೀರಿ.ಇದು ಸಂವಿಧಾನ ವಿರೋಧಿ ನಡೆ ಮತ್ತು ಸ್ವಾತಂತ್ರ್ಯ ಹರಣ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕಾಂಗ್ರೆಸ್ ಕಾಲದಲ್ಲಿ ಬ್ಯಾನ್ ಮಾಡಿದಾಗ ನೀವು ವಿರೋಧ ಮಾಡಿದ್ದೀರಿ ಎಂದು ನೆನಪಿಸಿದ ಮುತಾಲಿಕ್ ,ಪ್ರವೀಣ್ ನೆಟ್ಟಾರು ಮನೆಗೆ ಸಾಂತ್ವನ ಹೇಳುವಾಗಲೂ ನಿರ್ಬಂಧ ಮಾಡಿದ್ದೀರಿ.
ಗಂಗೊಳ್ಳಿಯ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲೂ ಭಾಗವಹಿಸಲು ನನ್ನನ್ನು ಬಿಟ್ಟಿಲ್ಲ. ನಾನು ಮಾತನಾಡಿದರೆ ಗಲಭೆ ಆಗುತ್ತೆ ಅನ್ನುತ್ತಿರಿ.ಗಲಾಟೆಯಾದರೆ ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿ..ಸಾಧ್ಯವಾದರೆ ಗಲಾಟೆ ಮಾಡುವವರನ್ನು ಹದ್ದುಬಸ್ತಿನಲ್ಲಿಡಿ.ಆದರೆ ಹಿಂದುಗಳಿಂದ ಯಾವತ್ತೂ ಗಲಭೆಯಾಗಿಲ್ಲ ಎಂಬುದು ನಿಮಗೆ ಗೊತ್ತಿರಲಿ. ಪದೇಪದೇ ನಿರ್ಬಂಧ ಹೇರಿ ನಾಟಕ ಮಾಡ್ತಾ ಇದ್ದೀರಾ?
ಮುಸ್ಲಿಮರನ್ನು, ಶತ್ರುಗಳನ್ನು ,ದಂಗೆ ಕೋರರನ್ನು ನನ್ನ ಮೇಲೆ ಎತ್ತಿ ಕಟ್ಟುತ್ತೀರಾ?ನ್ಯಾಯಾಲಯದಿಂದ ಸರ್ಕಾರಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತೇನೆ ಎಂದು ಗುಡುಗಿದ್ದಾರೆ.
PublicNext
20/09/2022 07:56 pm