ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ರಾಜ್ಯ ಬಿಜೆಪಿ ಸರಕಾರ ಎಲ್ಲಾ ರಂಗದಲ್ಲೂ ವಿಫಲ: ಮಾಜಿ ಸಚಿವ ಅಭಯ ಚಂದ್ರ ಜೈನ್

ಮುಲ್ಕಿ: ರಾಜ್ಯ ಸರಕಾರದ ಬಿಜೆಪಿ ಆಡಳಿತ ಎಲ್ಲಾ ರಂಗದಲ್ಲೂ ವಿಫಲಗೊಂಡಿದ್ದು ಮುಂದಿನ ದಿನಗಳಲ್ಲಿ ಯುವಕರು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಬೇಕು ಎಂದರು.

ಅವರುಮುಲ್ಕಿ ನಗರ ಪ್ರಜಾಪ್ರತಿನಿಧಿ ಸಮಿತಿಯ ನೂತನ ಕಾಂಗ್ರೆಸ್ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಮುಲ್ಕಿಯಲ್ಲಿ ನೂತನ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಅನಗತ್ಯವಾಗಿ ಹಣ ಪೋಲು ಮಾಡುತ್ತಿದ್ದು ಹಿಂದಿನ ಪ್ರವಾಸಿ ಮಂದಿರ ಪಾಳು ಬಿದ್ದಿರುವುದಕ್ಕೆ ಸಾಕ್ಷಿ ಎಂದು ಹೇಳಿದ ಅವರು ಮುಲ್ಕಿಗೆ ತಹಶಿಲ್ದಾರ್ ಕಚೇರಿ ಸಹಿತ ಅನೇಕ ಸವಲತ್ತುಗಳು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಬಂದಿದ್ದು ಈಗಿನ ಶಾಸಕರಿಗೆ ಇದುವರೆಗೂ ಅತಿ ಅಗತ್ಯದ ಅಗ್ನಿಶಾಮಕದಳ ಘಟಕ ನಿರ್ಮಾಣಕ್ಕೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಮಾತನಾಡಿ ಬಿಜೆಪಿ ಆಡಳಿತ ಅವಧಿಯಲ್ಲಿ ಅವ್ಯವಹಾರ ಮುಗಿಲು ಮುಟ್ಟಿದ್ದು ಈಗಾಗಲೇ ಅವ್ಯವಹಾರ ನಡೆಸಿದ ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟ ಸಂಘಟಿಸಲಾಗುವುದು ಎಂದರು.

ಮುಲ್ಕಿ ನಗರ ಪ್ರಜಾಪ್ರತಿನಿಧಿ ಸಮಿತಿಯ ಅಧ್ಯಕ್ಷ ಜನಾರ್ಧನ ಬಂಗೇರಾ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/09/2022 08:08 pm

Cinque Terre

3.03 K

Cinque Terre

0

ಸಂಬಂಧಿತ ಸುದ್ದಿ