ಉಳ್ಳಾಲ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಪರಿಶ್ರಮವೇ ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ಕಾರಣವೇ ಹೊರತು ಇದ್ದಕ್ಕಿದ್ದಂತೆ ಹರ್ ಘರ್ ತಿರಂಗ ನೆನಪು ಮಾಡಿದವರಾಗಲಿ ಅಥವಾ ಜೈಲಿನಿಂದ ಬಿಡುಗಡೆಗೊಳಿಸಿ ಎಂದು ಬ್ರಿಟೀಷರಲ್ಲಿ ಕ್ಷಮೆ ಕೋರಿದ್ದ ಸಾವರ್ಕರ್ ರಂತವರಿಂದಲ್ಲ ಎಂದು ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ಹೇಳಿದರು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಐಕ್ಯತೆಯ ತಿರಂಗಯಾತ್ರೆಯ ಅಂಗವಾಗಿ ಉಳ್ಳಾಲ ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಯುನಿಟಿ ಹಾಲ್ ನಿಂದ ಮುಡಿಪು ಜಂಕ್ಷನ್ ತನಕ ನಡೆದ ಕಾಲ್ನಡಿಗೆ ಜಾಥಾದ ಸಮಾರೋಪದಲ್ಲಿ ಅವರು ಮಾತನಾಡಿದರು. ಹರ್ ಘರ್ ಮೆ ತಿರಂಗ ಹಾರಿಸಲು ಹೊರಟವರಿಂದ ಈ ದೇಶದ ಸ್ವಾತಂತ್ರ್ಯಕ್ಕೆ ಕೊಟ್ಟ ಕೊಡುಗೆ ಏನು?ಅದ್ಯಾಕೋ ಗೊತ್ತಿಲ್ಲ ಭಾರತದ ಧ್ವಜ ಹಾರಿಸೋದನ್ನು ವಿರೋಧಿಸುತ್ತಿದ್ದ ಆರ್ ಎಸ್ಎಸ್ ಗೆ ಮನೆ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲು ಇದ್ದಕ್ಕಿದ್ದಂತೆ ಜ್ಞಾನೋದಯವಾಗಿದೆ ಎಂದು ಲೇವಡಿ ಮಾಡಿದರು.
ತೊಕ್ಕೊಟ್ಟಿನಿಂದ ಮುಡಿಪುವಿನ ತನಕ ಸಹಸ್ರಾರು ಮಂದಿ ಕೈ ಕಾರ್ಯಕರ್ತರು ತಿರಂಗ ಯಾತ್ರೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಶಾಸಕ ಯು.ಟಿ ಖಾದರ್,ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ,ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
PublicNext
07/09/2022 11:29 am