ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: 'ಅಧಿವೇಶನಲ್ಲಿ ಟೈಲರ್ಸ್‌ಗಳ ಬೇಡಿಕೆ ಪರ ಧ್ವನಿ ಎತ್ತುವೆ'

ಬ್ರಹ್ಮಾವರ: ಮುಂದಿನ ಅಧಿವೇಶನಲ್ಲಿ ಟೈಲರ್ಸ್‌ಗಳ ಬೇಡಿಕೆ ಪರವಾಗಿ ಧ್ವನಿ ಎತ್ತಲಿದ್ದೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಶಿಯೇಶನ್ ಬ್ರಹ್ಮಾವರ ಕ್ಷೇತ್ರ ಸಮಿತಿಯಿಂದ ಭಾನುವಾರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ರಾಜ್ಯದ ಟೈಲರ್ಸ್ ಸಂಘಟನೆಯೊಂದಿಗೆ ಅವಿನಾಭಾವ ಸಂಭದವಿದ್ದು, ಈ ಹಿಂದೆ ಕೂಡಾ ಅನೇಕ ಬೇಡಿಕೆಗೆಯನ್ನು ಸದನದಲ್ಲಿ ಗಮನ ಸೆಳೆದಿದ್ದೆ. ಈ ಬಾರಿಯೂ ರಾಜ್ಯದ ಎಲ್ಲಾ ಟೈಲರ್ಸ್ ಪರವಾಗಿ ಮಾತನಾಡಿ ನಿಮ್ಮ ಬೇಡಿಕೆಯನ್ನು ಈಡೇರಿಸುವ ಕುರಿತು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಜುಲೈ 26ರಂದು ರಾಜ್ಯದ ಎಲ್ಲಾ ಭಾಗದ ಟೈಲರ್ಸ್ ಒಂದು ದಿನ ಬಂದ್ ಆಚರಿಸಿ, ರಾಜ್ಯದ ಪ್ರತಿ ಜಿಲ್ಲಾಧಿಕಾರಿಗಳಿಗೆ ಹಲವಾರು ಬೇಡಿಕೆಯ ಮನವಿಯನ್ನು ಸಲ್ಲಿಸಲಾಗಿತ್ತು. ಕ್ಷೇತ್ರ ಸಮಿತಿಯ ಅಧ್ಯಕ್ಷ ನವೀನ ಬಿ.ರಾವ್ ಕೊಕ್ಕರ್ಣೆ, ಕಾರ್ಯದರ್ಶಿ ಕೃಷ್ಣ ದೇವಾಡಿಗ, ಬ್ರಹ್ಮಾವರ ನಗರ ಸಮಿತಿ ಅಧ್ಯಕ್ಷ ಪವಿತ್ರ ಕುಮಾರ್, ಕೋಟ ವಲಯ ಅಧ್ಯಕ್ಷ ಗಣೇಶ್, ಸಾಸ್ತಾನ ವಲಯ ಅಧ್ಯಕ್ಷೆ ಉಷಾ, ಬಾರಕೂರು ವಲಯದ ಗೌರಿ ಹಾಜರಿದ್ದರು.

Edited By : Vijay Kumar
Kshetra Samachara

Kshetra Samachara

05/09/2022 06:41 pm

Cinque Terre

2.11 K

Cinque Terre

0

ಸಂಬಂಧಿತ ಸುದ್ದಿ