ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಹೇರೂರಿನಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಗೆ ವಿರೋಧ

ಬ್ರಹ್ಮಾವರ: ಹೇರೂರಿನಲ್ಲಿ ಸ್ಥಾಪಿಸಲು ಉದ್ದೇಶೀಸಿದ ತ್ಯಾಜ್ಯ ಸಂಸ್ಕರಣ ಘಟಕ ರಚನೆ ಕುರಿತು ಗ್ರಾಮಸ್ಥರಿಂದ ಪ್ರತಿಭಟನಾ ಸಮಾಲೋಚನಾ ಸಭೆ ಜರುಗಿತು.

ತ್ಯಾಜ್ಯ ಸಂಸ್ಕರಣ ಘಟಕ ರಚನೆ ಕುರಿತು ಉಡುಪಿ ವಿಧಾನ ಸಭಾ ಕ್ಷೇತ್ರದ ಬ್ರಹ್ಮಾವರ ಬಳಿಯ ಹೇರೂರಿನಲ್ಲಿ ಶಾಸಕರ ಬೆಂಬಲಿಗರಿಂದಲೇ ಪ್ರತಿಭಟನಾ ಸಮಾಲೋಚನೆ ಸಭೆ ಭಾನುವಾರ ಹೇರೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಇಲ್ಲಿನ ಕೃಷಿ ಕೇಂದ್ರದ ಬಳಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಮಾಡಲು ಉದ್ದೇಶಿಸಿ 11 ಎಕರೆ ಜಾಗವನ್ನು ಸರ್ವೆ ಮಾಡಲು ಬಂದಾಗಲೇ ಹೇರೂರು ಗ್ರಾಮ ಪಂಚಾಯತಿಯ 11 ಸದಸ್ಯರಿಗೆ ತಿಳಿದು ಬಂದಾಗ ಗ್ರಾಮಸ್ಥರೂ ಬಾರೀ ವಿರೋಧ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಇಂದು ಇಲ್ಲಿನ ಗ್ರಾಮಸ್ಥರು ಹಲವಾರು ಸಂಘ ಸಂಸ್ಥೆಗಳು ಗ್ರಾಮ ಪಂಚಾಯತಿ ಸದಸ್ಯರು ವಿರೋಧ ವ್ಯಕ್ತಪಡಿಸಿ ಶಾಸಕ ರಘುಪತಿ ಭಟ್ ವಿರುದ್ಧ ತೀರಾ ಆಕ್ರೋಶ ಹೊರಹಾಕಿದ್ದಾರೆ.

ಜ್ಞಾನ ವಸಂತ ಶೆಟ್ಟಿ , ಬೈಕಾಡಿ ಸುಪ್ರಸಾದ್ ಶೆಟ್ಟಿ, ಸುನಿಲ್ ಸೂಡ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದರು.

Edited By : Shivu K
Kshetra Samachara

Kshetra Samachara

04/09/2022 03:50 pm

Cinque Terre

20.28 K

Cinque Terre

0

ಸಂಬಂಧಿತ ಸುದ್ದಿ