ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರಧಾನಿ ಮೋದಿಯವರು ಭಾಷಣದ ವೇಳೆ 'ನಳಿನ್, ಬಿಎಸ್ ವೈ' ಹೆಸರು ಹೇಳದಿರುವುದೇಕೆ..?; ಕಾಂಗ್ರೆಸ್ ಪ್ರಶ್ನೆ

ಮಂಗಳೂರು: ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆದ ಸರಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸಮಾವೇಶದಲ್ಲಿ ವೇದಿಕೆಯಲ್ಲಿದ್ದ ನಳಿನ್ ಕುಮಾರ್ ಕಟೀಲು ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಹೆಸರನ್ನು ಉಲ್ಲೇಖಿಸದಿರುವುದು ಏಕೆ ಎಂದು ಟ್ವಿಟ್ ಮೂಲಕ ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.

'ಬಿಎಸ್ ವೈ' ಈಗ ಚಲಾವಣೆಯಲ್ಲಿಲ್ಲದ ನಾಣ್ಯ. ಅವರು ವೇದಿಕೆಯಲ್ಲಿದ್ದರೂ ಸೌಜನ್ಯಕ್ಕಾದರೂ ಅವರ ಹೆಸರು ಹೇಳಲಿಲ್ಲ. ಇಷ್ಟು ಬೇಗ ಬಿಜೆಪಿಗರು ಒಡೆದ ಮಡಕೆಯಂತಾದರೇ?. ಅಡ್ವಾಣಿಯವರನ್ನೇ ಮುಕ್ತ ಮಾಡಿರುವಾಗ ಬಿಎಸ್ ವೈ ಮುಕ್ತ ಬಿಜೆಪಿ ಮಾಡೋದು ನರೇಂದ್ರ ಮೋದಿಯವರಿಗೆ ಯಾವ ಲೆಕ್ಕ. ಉಂಡ ಮನೆಯ ಗಳ ಹಿರಿಯುವುದು ಬಿಜೆಪಿ ಹುಟ್ಟುಗುಣ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಮತ್ತೊಂದು ಟ್ವೀಟ್ ನಲ್ಲಿ 'ನಳಿನ್ ಕುಮಾರ್ ಕಟೀಲು ಅವರು ರಾಜ್ಯ ಬಿಜೆಪಿ ಅಧ್ಯಕ್ಷ , ದಕ್ಷಿಣ ಕನ್ನಡದ ಸಂಸದ', ಹೀಗಿದ್ದೂ ವೇದಿಕೆಯಲ್ಲಿ ಪ್ರಧಾನಿ ಕಟೀಲ್‌ರ ಹೆಸರು ಹೇಳದಿರುವುದು ಏಕೆ ?, ಕಾರ್ಯಕರ್ತರು ಕಾರು ಅಲ್ಲಾಡಿಸಿದ ಪರಿಣಾಮವೇ ?, ನಳಿನ್ ವಿರೋಧಿ ಬಣದ ಅಭಿಯಾನಕ್ಕೆ ಸಿಕ್ಕ ಯಶಸ್ಸೇ ? , ಸಂಸತ್ ಅಭ್ಯರ್ಥಿ & ರಾಜ್ಯಾಧ್ಯಕ್ಷರ ಬದಲಾವಣೆಯ ಸೂಚನೆಯೇ ? ' ಎಂದು ಪ್ರಶ್ನೆ ಮಾಡಿದೆ.

Edited By : Nirmala Aralikatti
PublicNext

PublicNext

02/09/2022 10:45 pm

Cinque Terre

23.63 K

Cinque Terre

23

ಸಂಬಂಧಿತ ಸುದ್ದಿ