ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ರಾಜ್ಯ ವಸತಿ ಸಚಿವ ವಿಜಯಪುರ ಕಾಲೋನಿಗೆ ಭೇಟಿ

ಮುಲ್ಕಿ: ರಾಜ್ಯ ವಸತಿ ಸಚಿವ ವಿ ಸೋಮಣ್ಣ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಅವ್ಯವಸ್ಥೆಗಳ ಆಗರವಾಗಿರುವ ವಿಜಯಪುರ ಕಾಲೋನಿಗೆ ನಿನ್ನೆ ಭೇಟಿ ನೀಡಿ ಪರಿಶೀಲಿಸಿ ಅನುದಾನದ ಭರವಸೆ ನೀಡಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ಪ್ರದೇಶವಾಗಿ ಹಿಂದುಳಿದಿರುವ ವಿಜಯಪುರ ಕಾಲೋನಿಯ ನಿವಾಸಿಗಳು ಶಾಸಕರ ಬಳಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು.

ಈ ಸಂದರ್ಭ ಸಚಿವರು ಮಾತನಾಡಿ ಮುಂದಿನ ದಿನಗಳಲ್ಲಿ ಅಧಿಕಾರಿಗಳನ್ನು ಕಳುಹಿಸಿ ಸರ್ವೆ ನಡೆಸಿ ಅನುದಾನ ಬಿಡುಗಡೆ ಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಶಾಸಕ ಉಮಾನಾಥ ಕೋಟ್ಯಾನ್, ಮುಲ್ಕಿ ನ ಪಂ ಅಧ್ಯಕ್ಷ ಸುಭಾಶ್ ಶೆಟ್ಟಿ, ಸದಸ್ಯ ಶೈಲೇಶ್, ಈರಣ್ಣ ಅರಳಗುಂಡಿ, ಮಾಜಿ ಸದಸ್ಯ ವಿಠಲ್ ಎನ್ ಎಂ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

28/08/2022 08:35 am

Cinque Terre

11.44 K

Cinque Terre

2

ಸಂಬಂಧಿತ ಸುದ್ದಿ