ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಸುರತ್ಕಲ್ ಟೋಲ್ ತೆರವು ದಿನಾಂಕ ಅಧಿಕೃತವಾಗಿ ಘೋಷಣೆಯಾಗಲಿ"

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ಅನ್ನು ಒಂದು ತಿಂಗಳ ಒಳಗೆ ತೆರವು ಮಾಡಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಅಧಿಕಾರಿ ಹೇಳಿರುವುದು ಸ್ವಾಗತಿಸುತಾರ್ಹ. ಆದರೆ, ಈ ಭರವಸೆಯನ್ನು ನಂಬಲಸಾಧ್ಯ. ಟೋಲ್ ಗೇಟ್ ತೆರವು ಕಾರ್ಯ ನಡೆಯುತ್ತಿರುವುದು ಹೌದಾದಲ್ಲಿ ಟೋಲ್ ಸಂಗ್ರಹ ನಿಲ್ಲುವ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿ ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆಗ್ರಹಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು, ಈ ದಿನಾಂಕವನ್ನು ಜಿಲ್ಲಾಧಿಕಾರಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಅಧಿಕಾರಿಯವರು ಅಧಿಕೃತವಾಗಿ ಪ್ರಕಟಿಸಲಿ.‌ ಅಲ್ಲದೆ, ಟೋಲ್ ತೆರವು ಮಾಡುವ ದಿನಾಂಕವನ್ನು ಘೋಷಿಸಬೇಕೆಂದು ಸೆಪ್ಟೆಂಬರ್ 13ರಂದು ಸುರತ್ಕಲ್ ಟೋಲ್ ಗೇಟ್ ಮುಂಭಾಗ ಸಾಮೂಹಿಕ ಧರಣಿ ನಡೆಸಲಾಗುತ್ತದೆ ಎಂದರು.

ಸಾಮೂಹಿಕ ಧರಣಿಯ ದಿನವೂ ದಿನಾಂಕ ಪ್ರಕಟಣೆಯಾಗದಿದ್ದಲ್ಲಿ ಬೃಹತ್ ಸಂಖ್ಯೆಯಲ್ಲಿ ಟೋಲ್ ಗೆ ಮುತ್ತಿಗೆ ಹಾಕುವ ದಿನಾಂಕವನ್ನು ಅದೇ ಧರಣಿಯಲ್ಲಿಯೇ ಘೋಷಣೆ ಮಾಡಲಾಗುತ್ತದೆ. ಆರು ವರ್ಷಗಳಿಂದ ಈ ಟೋಲ್ ಜಾರಿಯಲ್ಲಿದ್ದು, ಸರಿಸುಮಾರು ಅಕ್ರಮವಾಗಿ 450 ಕೋಟಿ ರೂ. ಟೋಲ್ ಸಂಗ್ರಹ ಆಗಿದೆ. ಆದ್ದರಿಂದ ಟೋಲ್ ಗೇಟ್ ತೆರವು ಕಾರ್ಯ ಯಾವ ಹಂತದಲ್ಲಿದೆ ಎಂಬುದನ್ನು ಘೋಷಣೆ ಮಾಡಲಿ ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

26/08/2022 06:47 pm

Cinque Terre

4.57 K

Cinque Terre

3

ಸಂಬಂಧಿತ ಸುದ್ದಿ