ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜಿಲ್ಲೆ ಅಭಿವೃದ್ಧಿಗೆ ಸಹಕರಿಸುತ್ತೇನೆ: ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್

ಉಡುಪಿ: ಉಡುಪಿ ಜಿಲ್ಲೆಯಾಗಿ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇವತ್ತು ರಜತ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಭಾಗಿಯಾದರು. ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲರು ಉಡುಪಿ ಜಿಲ್ಲೆಯನ್ನು ಕೊಂಡಾಡಿದರು.

ಉಡುಪಿ ದೇವತೆಗಳ ಭೂಮಿ, ಶತಮಾನಗಳಿಂದಲೂ ಧಾರ್ಮಿಕ ಕ್ಷೇತ್ರವಾಗಿ ಮಹತ್ವ ಪಡೆದಿದೆ. ಕಳೆದ 25 ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ದಿ ವೇಗ ಪಡೆದುಕೊಂಡಿದೆ.

ಕರ್ನಾಟಕ ಕರಾವಳಿ ಐತಿಹಾಸಿಕ, ಧಾರ್ಮಿಕ, ಕಲೆಗಳಿಂದ ಪ್ರಸಿದ್ದಿ ಪಡೆದಿದೆ.ಉಡುಪಿ ಭವಿಷ್ಯದಲ್ಲಿ ರಾಷ್ಟ್ರದ ಅಗ್ರಗಣ್ಯ ಜಿಲ್ಲೆಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಕಳದ ಕಲಾವಿದರು ಕಲ್ಲಿಗೆ ಜೀವ ತುಂಬುವವರು ಎಂದ ರಾಜ್ಯಪಾಲರು, ಆಚಾರ್ಯ ಮಧ್ವರು ನಾಡಿಗೆ ಧಾರ್ಮಿಕ ಮಾರ್ಗ ತೋರಿದವರು.ನಾಗಾರಾಧನೆ, ಸಿರಿ, ಭೂತ ಕೋಲ, ಆಟಿ ಕಳಂಜದಂತಹ ಅದ್ಬುತ ಜನಪದದ ಬೀಡು. ಜಿಲ್ಲೆಯಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚು ಇದ್ದು ದೇಶದ ಯಾವುದೇ ಜಿಲ್ಲೆಯಲ್ಲಿ ಈ ಪ್ರಮಾಣದ ಮಹಿಳೆಯರಿಲ್ಲ ಎಂದರು.

ಮೀನುಗಾರಿಕೆ ನಂಬಿ ಎರಡು ಲಕ್ಷ ಜನರಿದ್ದು ದೊಡ್ಡ ಆರ್ಥಿಕ ಕೊಡುಗೆ ನೀಡುತ್ತಿದ್ದಾರೆ. ಕರಾವಳಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಎಂದ ಅವರು ,ಅಭಿವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ, ಕೇಂದ್ರದ ಜೊತೆ ತಾವು ಸಂಪರ್ಕವಾಗಿ ಸಹಕರಿಸುವುದಾಗಿ ಕರಾವಳಿ ಜನರಿಗೆ ಭರವಸೆ ನೀಡಿದರು.

Edited By : Manjunath H D
PublicNext

PublicNext

25/08/2022 11:05 pm

Cinque Terre

46.69 K

Cinque Terre

0

ಸಂಬಂಧಿತ ಸುದ್ದಿ