ಕುಂದಾಪುರ: ರಾಜ್ಯವನ್ನು ಭ್ರಷ್ಟಾಚಾರದ ಮೂಲಕ ಅರಾಜಕತೆಯತ್ತ ದೂಡುತ್ತಿರುವ ಜೆಸಿಬಿಗಳು ಅಂದ್ರೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಜನರನ್ನು ಅತಂತ್ರಗೊಳಿಸಿವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಅಧ್ಯಕ್ಷ, ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಕೆ.ಆರ್.ಎಸ್ ಪಕ್ಷವು ಹಮ್ಮಿಕೊಂಡಿರುವ ಜನ ಚೈತನ್ಯ ಯಾತ್ರೆಯ ನೇತೃತ್ವ ವಹಿಸಿ ಬುಧವಾರ ಸಂಜೆ ಕುಂದಾಪುರಕ್ಕೆ ಆಗಮಿಸಿದ ಸಂದರ್ಭ ಪಬ್ಲಿಕ್ ನೆಕ್ಸ್ಟ್ ಜೊತೆ ಅವರು ಮಾತನಾಡಿದರು. 'ರಾಜ್ಯದ ಚುಕ್ಕಾಣಿ ಹಿಡಿದು ಅಧಿಕಾರ ಅನುಭವಿಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಸ್ವಾರ್ಥ ರಾಜಕಾರಣ ಮಾಡುತ್ತಾ ಜನರನ್ನು ಮತ್ತಷ್ಟು ಕಡುಬಡವರನ್ನಾಗಿ ಮಾಡಿವೆ. ರಾಜ್ಯ ಭ್ರಷ್ಟಾಚಾರದ ಕೂಪವಾಗಿದೆ' ಎಂದು ಆರೋಪಿಸಿದರು.
ಈಗಾಗಲೇ ಒಂದು ವೋಟು ಒಂದು ನೋಟು ಧ್ಯೇಯದೊಂದಿಗೆ ಜನ ಚೈತನ್ಯ ಯಾತ್ರೆಯ ಮೂಲಕ ಎರಡು ಹಂತಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನಾಂದೋಲನ ನಡೆಸಲಾಗಿದೆ. ಮೂರನೇ ಹಂತದಲ್ಲಿ ಉಡುಪಿ, ಕುಂದಾಪುರ, ದಕ್ಷಿಣ ಕನ್ನಡ, ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸಲಾಗುತ್ತಿದೆ. ಗುರುವಾರ (ನಾಳೆ) ಜನಸಾಮಾನ್ಯರ ದೂರುಗಳನ್ನು ಸ್ವೀಕರಿಸಿ ಕುಂದಾಪುರ ಹಾಗು ಬೈಂದೂರು ತಾಲೂಕು ಕಚೇರಿ ಹಾಗೂ ವಿವಿಧ ಸರ್ಕಾರೀ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಕೆ.ಆರ್.ಎಸ್ ಪಕ್ಷಕ್ಕೆ ದೇಣಿಗೆಯನ್ನು ನೀಡಿದರು. ಜನ ಚೈತನ್ಯ ಯಾತ್ರೆಯ ಸಂದರ್ಭ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿಗಳು ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ರಘುಪತಿ ಭಟ್, ರಾಜ್ಯ ಕಾರ್ಯದರ್ಶಿ ಬಿ.ಕೆ. ಪ್ರಸನ್ನ, ಸೋಮಸುಂದರ್, ಕುಂದಾಪುರ ತಾಲೂಕು ಕೆ.ಆರ್. ಎಸ್ ಮುಖಂಡ ವಿಜಯ ಪೂಜಾರಿ, ಪ್ರಶಾಂತ್ ಪಿ.ಆರ್.ಎಸ್ ಮತ್ತು ಕಾರ್ಯಕರ್ತರು ಇದ್ದ
PublicNext
24/08/2022 10:17 pm