ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿ ಮಂಗಳೂರು ಭೇಟಿ ವೇಳೆ ನಳಿನ್ ವಿರುದ್ಧ ಬೃಹತ್ ಜನಾಕ್ರೋಶಕ್ಕೆ ಸಿದ್ಧತೆ...!

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಸೆ.2ರಂದು ಭೇಟಿ ನೀಡುತ್ತಿರುವುದು ಬಿಜೆಪಿ ಪಾಳಯದಲ್ಲಿ ಹೊಸ ಹೊಮ್ಮಸ್ಸು ಮೂಡಿದೆ‌. ಆದರೆ ಈ ನಡುವೆ ಬದಲಾವಣೆಯ ಅಭಿಯಾನದ ಕೂಗು ಬಿಜೆಪಿಗೆ ಇರಿಸುಮುರಿಸು ತಂದಿದೆ.

ಬಿಜೆಪಿಯ ನೆಚ್ಚಿನ ಪೋಸ್ಟ್ ಕಾರ್ಡ್ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ವಿರುದ್ಧ ನೇರ ಅಭಿಯಾನಕ್ಕೆ ಕೈ ಹಾಕಿದೆ. ಮೋದಿಜಿಯವರನ್ನು ಅದ್ಧೂರಿಯಾಗಿ ಸ್ವಾಗತಿಸುವ ಮೊದಲು ನಮ್ಮ‌ ಜಿಲ್ಲೆಯ ಸಂಸದರ ಬದಲಾವಣೆಯ ಕೂಗು ಕೇಳಿಬರಲಿ ಎಂದು ಪೋಸ್ಟ್ ಹಾಕಿದೆ. ಅದೇ ರೀತಿ 'ನಮೋ ಕರುನಾಡು' ಎಂಬ ಪೇಜ್ 'ತುಳುವರೇ ಮೋದಿಜೀ ಮಂಗಳೂರಿಗೆ ಬರುತ್ತಿದ್ದಾರೆ. ವಿಶ್ವ ನಾಯಕನನ್ನು ಸ್ವಾಗತಿಸುದರೊಂದಿಗೆ ದುರ್ಬಲ ಸಂಸದ, ರಾಜ್ಯಾಧ್ಯಕ್ಷರನ್ನು ಬದಲಾಯಿಸಲು ಒತ್ತಾಯಿಸೋಣ ಎಂದು ಪೋಸ್ಟ್ ಮಾಡಿದೆ.

ಇಂತಹ ಪೋಸ್ಟ್ ಗಳಿಂದ ಮೋದಿಯವರ ಆಗಮನದ ವೇಳೆ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಕಾರ್ಯಕರ್ತರ ಆಕ್ರೋಶ ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಇತ್ತೀಚೆಗೆ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಬಿಜೆಪಿ ಕಾರ್ಯಕರ್ತರೇ ನಳಿನ್ ಕುಮಾರ್ ಕಾರ್ ನ್ನು ಅಲುಗಾಡಿಸಿ ಟಯರ್ ಪಂಚರ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.‌ ಇದೀಗ ಈ ರೀತಿಯ ಆಕ್ರೋಶ ನಳಿನ್ ಕುಮಾರ್ ಕಟೀಲು ಅವರಿಗೆ ಸಂಕಷ್ಟವನ್ನೊಡ್ಡಲಿದೆಯೇ ಎಂದು ಕಾದು ನೋಡಬೇಕಿದೆ‌.

Edited By : Nirmala Aralikatti
Kshetra Samachara

Kshetra Samachara

23/08/2022 07:35 pm

Cinque Terre

11.53 K

Cinque Terre

9

ಸಂಬಂಧಿತ ಸುದ್ದಿ