ಉಡುಪಿ: ಉಡುಪಿಯಲ್ಲಿ ಒಂದೆಡೆ ಸಾವರ್ಕರ್ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದರೆ , ಶಾಸಕ ರಘುಪತಿ ಭಟ್ ಸಾವರ್ಕರ್ ಪ್ರತಿಮೆ ನಿರ್ಮಾಣ ಸದ್ಯಕ್ಕೆ ಸಮಂಜಸ ಅಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು, ಆದರೆ ನಗರದ ಹಳೆ ತಾಲೂಕು ಕಚೇರಿ ಬಳಿಯ ವೃತ್ತಕ್ಕೆ ಸಾವರ್ಕರ್ ವೃತ್ತ ಎಂದು ನಾಮಕರಣ ಮಾಡುತ್ತೇವೆ. ಆದರೆ ಪ್ರತಿಮೆ ಮಾಡಿದರೆ ಮತ್ತೆ ಅದು ಅನಗತ್ಯ ವಿವಾದಕ್ಕೆ ಕಾರಣ ಆಗಬಹುದು ಎಂದು ಹೇಳಿದ್ದಾರೆ.
ವೃತ್ತಕ್ಕೆ ಸಾವರ್ಕರ್ ಹೆಸರು ನಾಮಕರಣ ಮಾಡುವ ಬಗ್ಗೆ ಮುಂದಿನ ನಗರಸಭಾಧಿವೇಶನದಲ್ಲಿ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಇದು ಖಚಿತ ಆದರೆ ಪ್ರತಿಮೆ ನಿರ್ಮಾಣ ಕುರಿತು ಚರ್ಚಿಸಬೇಕಾದ ಅಗತ್ಯ ಇದೆ ಎಂದು ಹೇಳಿದ್ದಾರೆ.
PublicNext
23/08/2022 02:34 pm