ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನೀವು ಯಾರ ವಿರುದ್ಧ ಮಡಿಕೇರಿ ಚಲೋ ಮಾಡುತ್ತಿದ್ದೀರಿ? ಸಿದ್ದರಾಮಯ್ಯಗೆ ಸಚಿವ ಸುನಿಲ್ ಕುಮಾರ್ ಟಾಂಗ್

ಕಾರ್ಕಳ: ಸಿದ್ದರಾಮಯ್ಯ ನಡವಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಬೇಸರಗೊಂಡಿದ್ದು ಕೊಡಗಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಆಕ್ರೋಶ ಹೊರ ಹಾಕಿದ್ದಾನೆ. ಸಿದ್ದರಾಮಯ್ಯಗೆ ಮೊಟ್ಟೆ ಎಸೆದದ್ದು ಡಿಕೆ ಶಿವಕುಮಾರ್ ಬಣವೋ ಅಥವಾ ಪರಮೇಶ್ವರ್ ಬಣವೋ ಎಂಬುದನ್ನು ಕಾಂಗ್ರೆಸ್ ಬಹಿರಂಗಪಡಿಸಬೇಕು ಎಂದು ಇಂಧನ ಸಚಿವ ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಕಾರ್ಕಳದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ವಿನಾಕಾರಣ ಬಿಜೆಪಿ ಮೇಲೆ ಆರೋಪ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಆಡಳಿತದ ಮೂಲಕವೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿದ್ದರು. ಸ್ವಾತಂತ್ರ ಹೋರಾಟಗಾರರ ವಿರುದ್ಧ ಮಾತನಾಡಿದಾಗ ಇಡೀ ರಾಜ್ಯದಲ್ಲಿ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದರು.

ಪ್ರತಿಭಟನೆ ಮಾಡಲೇಬಾರದು ಎಂದಾದರೆ ನೀವು ಕೇವಲ ಮುಸ್ಲಿಂ ಏರಿಯಾಗಳಲ್ಲಿ ಮಾತ್ರ ಓಡಾಟ ಮಾಡಬೇಕಾಗುತ್ತದೆ. ಉಳಿದ ಏರಿಯಾಗಳಲ್ಲಿ ಸಮಾಜ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಿಯೇ ಮಾಡುತ್ತದೆ. ಪ್ರತಿಭಟನೆಗಳನ್ನು ಸಿದ್ದರಾಮಯ್ಯ ಗೌರವಪೂರ್ಣವಾಗಿ ಸ್ವೀಕರಿಸಬೇಕು. ಅಧಿಕಾರದಲ್ಲಿದ್ದಾಗ ಮತ್ತು ಈಗ ಸಿದ್ದರಾಮಯ್ಯ ಸಮಾಜವಿರೋಧಿ, ಹಿಂದೂ ವಿರೋಧಿ ಎಂಬುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದ್ದಾರೆ.

ಮಡಿಕೇರಿ ಚಲೋ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಚಲೋದಲ್ಲಿ ಕಾಂಗ್ರೆಸ್‌ನ ಟೂಲ್ ಅಜೆಂಡಾ ಕಾಣುತ್ತಿದೆ. ಕೊಡಗಿಗೆ ಕಾಲ್ನಡಿಗೆಗೆ ಯಾರ ವಿರೋಧವೂ ಇಲ್ಲ. ನಿಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ನೀವು ಯಾರ ವಿರುದ್ಧ ಕಾಲ್ನಡಿಗೆ ಮಾಡುತ್ತೀರಿ? ಯಾರ ವಿರುದ್ಧ ನೀವು ಪ್ರತಿಭಟನೆಗಳನ್ನು ಮಾಡುತ್ತೀರಿ? ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದರು.

Edited By : Shivu K
Kshetra Samachara

Kshetra Samachara

22/08/2022 11:46 am

Cinque Terre

9.01 K

Cinque Terre

1

ಸಂಬಂಧಿತ ಸುದ್ದಿ