ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಸಿದ್ದರಾಮಯ್ಯ ಸಾಧನೆ‌ ಸಹಿಸದೇ ಮೊಟ್ಟೆ ಎಸೆತ: ಮಾಜಿ ಶಾಸಕ ಗೋಪಾಲ ಪೂಜಾರಿ

ಕುಂದಾಪುರ: ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಾಧನೆಯನ್ನು ಸಹಿಸಲಾಗದೆ ಅವರ ಕಾರಿಗೆ ಮೊಟ್ಟೆ ಎಸೆಯುವ ಕೆಲಸವನ್ನು ಮಾಡಲಾಗಿದೆ ಎಂದು ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದರು.

ಈ ಕೃತ್ಯ ಎಸಗಿದ್ದ ವ್ಯಕ್ತಿಗೆ ಶಿಕ್ಷೆಯಾಗಬೇಕಿತ್ತು. ಆದರೆ, ಆತನನ್ನು ಅವತ್ತೇ ಠಾಣೆಯಿಂದ ಬಿಟ್ಟುಕಳಿಸಲಾಗಿದೆ. ಇದು ಸರ್ಕಾರದ ಹುನ್ನಾರ ಈ ರೀತಿ ಕಿರುಕುಳ ಕೊಟ್ಟು ವಿರೋಧ ಪಕ್ಷವನ್ನು ದಮನ ಮಾಡುವ ಸಾಹಸಕ್ಕೆ ಕೈ ಹಾಕುತ್ತಿದೆ. ಇದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಇದನ್ನು ಪ್ರತಿಭಟಿಸುವ ಮೂಲಕ ಎಚ್ಚರಿಕೆ ನೀಡುತ್ತದೆ ಎಂದರು. ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದಾಚರಣೆಗೆ ನಿರೀಕ್ಷೆಗೂ ಮೀರಿದ ಜನರು, ಅಭಿಮಾನಿಗಳು ಆಗಮಿಸಿ ಇತಿಹಾಸ ಸೃಷ್ಟಿಸಿದ ಕಾರ್ಯಕ್ರಮ ಇದಾಗಿತ್ತು. ಈ ಯಶಸ್ಸಿನಿಂದ ಹತಾಶರಾಗಿ, ಮುಂದೆ ತಮ್ಮಸರ್ಕಾರ ಬರುವುದಿಲ್ಲ ಎಂದು ಈ ರೀತಿ ಗಲಭೆ ಮಾಡಿ, ಸಿದ್ದರಾಮಯ್ಯ ಅವರ ಮನೋಭಾವನೆ ತಗ್ಗಿಸುವ ದುರಾಲೋಚನೆ ಇದೆ. ಅದು ಆಗುವುದಿಲ್ಲ. ಸಿದ್ದರಾಮಯ್ಯ ಅವರು ಇನ್ನು ಹೆಚ್ಚು ಜನರ ಬಳಿ ಹೋಗಿ ಕಾಂಗ್ರೆಸ್ ಕಟ್ಟುವ, ಅಧಿಕಾರಕ್ಕೆ ತರುವ ಕೆಲಸ ಮಾಡುತ್ತಾರೆ ಎಂದರು.

Edited By : Nagaraj Tulugeri
Kshetra Samachara

Kshetra Samachara

21/08/2022 08:55 pm

Cinque Terre

5.02 K

Cinque Terre

0

ಸಂಬಂಧಿತ ಸುದ್ದಿ