ಉಡುಪಿ: ಸರ್ಕಾರಿ ಶಾಲೆಗಳಲ್ಲಿ ಶ್ರೀ ಗಣೇಶೋತ್ಸವ ಪರ- ವಿರೋಧ ವಿಚಾರವಾಗಿ ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವ ಸುನಿಲ್ ಕುಮಾರ್ , ಸರ್ಕಾರಿ ಶಾಲೆಗಳಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವಗಳು ನಡೆಯುತ್ತೆ. ಆದರೆ, ನಮಾಜಿಗೆ ಬಿಡಲ್ಲ ಎಂದು ಹೇಳಿದರು.
ದೇಶದ ಸಂಪ್ರದಾಯ ಮತ್ತು ಪರಂಪರೆಯನ್ನು ನಾವು ಉಳಿಸಿಕೊಳ್ಳುತ್ತೇವೆ ಎಂದ ಅವರು, ಅನಗತ್ಯವಾಗಿ ಇದನ್ನು ವಿವಾದ ಮಾಡಬೇಡಿ. ಸರ್ಕಾರಿ ಶಾಲೆಗಳಲ್ಲಿ ಸಹಜವಾಗಿಯೇ ಸಾರ್ವಜನಿಕ ಶ್ರೀ ಗಣೇಶ ಉತ್ಸವಗಳು ನಡೆಯುತ್ತವೆ.
ಶಾಲೆಯ ಆಟದ ಮೈದಾನದಲ್ಲೂ ಶ್ರೀ ಗಣೇಶೋತ್ಸವ ನಡೆಯುತ್ತೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ನಮ್ಮ ಸರಕಾರ ಸಹಿಸಿಕೊಳ್ಳುವುದಿಲ್ಲ. ನಮಾಜ್ ಗೆ ಶಾಲೆ ಆವರಣದಲ್ಲಿ ಅವಕಾಶ ಕೊಡುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ ಎಂದರು.
PublicNext
19/08/2022 05:26 pm