ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಾಲಿಸ್ಟರ್ ರಾಷ್ಟ್ರಧ್ವಜ‌ ಬಳಕೆ ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅಪಮಾನ: ಖಾದರ್

ಮಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭ ಖಾದಿಯನ್ನು ಪ್ರೋತ್ಸಾಹಿಸುವಂತೆ ಖಾದಿಯನ್ನು ಬಳಸುವಂತಹ ಸಂದೇಶವನ್ನು ಕೇಂದ್ರ ಸರ್ಕಾರವು ದೇಶ ಮಾತ್ರವಲ್ಲದೆ ಇಡೀ ವಿಶ್ವಕ್ಕೇ ಸಾರಬೇಕಿತ್ತು. ಆದರೆ ಕೇಂದ್ರ ಸರಕಾರವು ಭಾರತದ ರಾಷ್ಟ್ರಧ್ವಜ ಕಾಯ್ದೆಯನ್ನು ತಿದ್ದುಪಡಿ ಮಾಡಿ ಖಾದಿ ಬದಲು ಪಾಲಿಸ್ಟರ್ ರಾಷ್ಟ್ರಧ್ವಜ ಬಳಕೆಗೆ ಅವಕಾಶ ಕಲ್ಪಿಸಿದ್ದು, ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅಪಮಾನ ಎಂದು ಶಾಸಕ ಯು.ಟಿ.ಖಾದರ್ ಆಕ್ಷೇಪಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಕೇಂದ್ರ ಸರಕಾರ ಮಾತಿನಲ್ಲಿ ಸ್ವದೇಶಿ ಎಂದು ಹೇಳಿ, ವಿದೇಶಿ ತಂತ್ರವನ್ನು ಅನುಷ್ಠಾನ ಮಾಡುತ್ತಿದೆ. ರಾಷ್ಟ್ರಧ್ವಜ ಕೇವಲ ಬಟ್ಟೆಯಲ್ಲ , ಖಾದಿ ಈ ದೇಶದ ತಾಯಿ ಬೇರು.‌ ರಾಷ್ಟ್ರಧ್ವಜಕ್ಕೆ ವಿದೇಶಗಳಿಂದ ಪಾಲಿಸ್ಟರ್ ಬಟ್ಟೆಗಳನ್ನು ತಂದು ಗುಡ್ಡೆ ಹಾಕುವುದು ಸರಿಯಲ್ಲ ಎಂದು ಹೇಳಿದರು.

ಖಾದಿ ನೇಯುವ ಚರಕ ಖಾಲಿ ಚಿಹ್ನೆಯಲ್ಲ, ಅದು ರಾಜಾಡಳಿತ ಕಿತ್ತೆಸೆದ ಸಂಕೇತ. ಖಾದಿ ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸಂಕೇತ. ಪಾಲಿಸ್ಟರ್ ಅನ್ನು ಆಮದಿಗೆ ಅವಕಾಶ ನೀಡಲಾಗಿದೆ. ಪರಿಣಾಮ ಚೀನಾ ದೇಶವು ಲಾಭ ಪಡೆಯಲಿದೆ. ಕೆಲವೊಂದು ಆ್ಯಪ್ ಗಳನ್ನು ಬ್ಯಾನ್ ಮಾಡಿ ಪೋಸ್ ಕೊಟ್ಟಿರುವ ಸರ್ಕಾರದ ಈ ಗೊಂದಲಕಾರಿಯಾದ ನಿರ್ಧಾರ ಇಡೀ ದೇಶಕ್ಕೆ ಅವಮಾನ. ಕೇಂದ್ರ ಇದನ್ನ ಪುನರ್ ಪರಿಶೀಲಿಸಿ ಖಾದಿಗೆ ಮಹತ್ವ ಕೊಡಬೇಕು ಅಂದು ಖಾದರ್ ಆಗ್ರಹಿಸಿದರು.

Edited By : Nagesh Gaonkar
PublicNext

PublicNext

09/08/2022 06:13 pm

Cinque Terre

39.41 K

Cinque Terre

7

ಸಂಬಂಧಿತ ಸುದ್ದಿ