ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಒಂದೆರೆಡು ದಿನಗಳಲ್ಲಿ ಪ್ರವೀಣ್ ಹಂತಕರ ಬಂಧನ: ಸಚಿವ ಸುನಿಲ್ ವಿಶ್ವಾಸ

ಉಡುಪಿ: ಬಿಜೆಪಿ ಮುಖಂಡ ಪ್ರವೀಣ್ ಹಂತಕರನ್ನು ಒಂದೆರೆಡು ದಿನಗಳಲ್ಲಿ ಬಂಧಿಸುವ ವಿಶ್ವಾಸವಿದೆ ಎಂದು ಇಂಧನ ,ಕನ್ನಡ ಸಂಸ್ಕೃತಿ ಚಿವ ಸುನಿಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಣಿಪಾಲದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕೊಲೆ ಮಾಡಿದವರು ಕೇರಳದವರಲ್ಲ ಸ್ಥಳೀಯರು ಎಂದು ಗೃಹಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಪೋಲಿಸ್ ಇಲಾಖೆಗೆ ಮುಕ್ತವಾದ ಅವಕಾಶ ನೀಡಿದ್ದೇವೆ. 3-4 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಿದರು.

ಉಡುಪಿ ,ದಕ್ಷಿಣ ಕನ್ನಡದಲ್ಲಿ 10 ಲಕ್ಷ ಮನೆಗಳಲ್ಲಿ ರಾಷ್ಟ್ರಧ್ವಜ

ಉಡುಪಿಯಲ್ಲಿ 4 ಲಕ್ಷ ಮತ್ತು ದ.ಕದಲ್ಲಿ 6 ಲಕ್ಷ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲಾಗುವುದು ಎಂದ ಸಚಿವರು, ಆಗಸ್ಟ್ 13 ರಿಂದ ರಾಜ್ಯದ ಎಲ್ಲಾ 5 ರಂಗಾಯಣಗಳಲ್ಲಿ ಸ್ವಾತಂತ್ರ್ಯದ ನಾಟಕ ಪ್ರದರ್ಶನ ಮಾಡಲಿದ್ದೇವೆ. ಕೋವಿಡ್ ಸಂದರ್ಭದಲ್ಲಿ ರಂಗಾಯಣಗಳಿಗೆ ಅನುದಾನದ ಕೊರತೆಯಾಗಿತ್ತು. ಈ ಬಾರಿ ಹೆಚ್ಚಿನ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಕೋರಲಾಗಿದೆ.ಹೆಚ್ಚಿನ ಅನುದಾನ ನೀಡಲು ಆರ್ಥಿಕ ಇಲಾಖೆ ಒಪ್ಪಿದೆ ಎಂದು ಸಚಿವರು ಹೇಳಿದ್ದಾರೆ.

Edited By : Shivu K
Kshetra Samachara

Kshetra Samachara

06/08/2022 08:46 pm

Cinque Terre

20.54 K

Cinque Terre

9

ಸಂಬಂಧಿತ ಸುದ್ದಿ