ಸುಳ್ಯ: "ಬಿಜೆಪಿ ರಾಜ್ಯಾಧ್ಯಕ್ಷರ ತಲೆ ಒಡೆಯಬೇಕಿತ್ತು. ನಾವು ಬಿಜೆಪಿಯವರೊಟ್ಟಿಗೇ ಇದ್ದಿದ್ರೆ ನಾವೂ ಹೆಣವಾಗುತ್ತಿದ್ದೆವು" ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ವಾಗ್ದಾಳಿ ನಡೆಸಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಹಿಂದೂ ರಾಷ್ಟ್ರ ನಿರ್ಮಾಣದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ, ಈಗ ಹಿಂದೂಗಳನ್ನೇ ಹತ್ಯೆ ಮಾಡಲು ಅವಕಾಶ ಮಾಡಿಕೊಟ್ಟಿದೆ! ಇನ್ನು, ಪ್ರವೀಣ್ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಲು ಹಿಂದೂ ಸಮಾಜ ಆಗ್ರಹಿಸಿದ್ರೆ ಈಗ ಸರಕಾರ 25 ಲಕ್ಷ ಮತ್ತು ಬಿಜೆಪಿ ಪಕ್ಷ 50 ಲಕ್ಷ ರೂ. ನೀಡಿ ಕೈತೊಳೆದುಕೊಂಡಿದೆ. 40 ಶೇಕಡಾ ಕಮಿಷನ್ ಹೊಡೆಯುವ ಬಿಜೆಪಿಗರು ಇದರಲ್ಲಿ 50 ಶೇಕಡಾ ಕಮಿಷನ್ ಹೊಡೆದಿರಬೇಕು ಎಂದು ಆರೋಪಿಸಿದರು.
ಪ್ರಮೋದ್ ಮುತಾಲಿಕ್ ಅವರನ್ನು ದ.ಕ. ಗಡಿಯಿಂದಲೇ ಹಿಂದಕ್ಕೆ ಕಳಿಸಿದ್ದಾರೆ. ಅಂತಹ ತಪ್ಪು ಮುತಾಲಿಕ್ ಏನು ಮಾಡಿದ್ದಾರೆ? ಅವರೇನು ಭಯೋತ್ಪಾದಕರೇ? ಬೆಳ್ಳಾರೆ, ಮಂಗಳೂರು, ಬೆಂಗಳೂರು ಎಂದೆಲ್ಲ ಎಲ್ಲೆಲ್ಲೂ ಭಯೋತ್ಪಾದಕರ ತಿರುಗಾಟಕ್ಕೆ ಅವಕಾಶ ನೀಡಿರುವ ಬಿಜೆಪಿ ಸರಕಾರ, ಈಗ ರಾಷ್ಟ್ರ ಪ್ರೇಮಿ ಹಾಗೂ ಹಿಂದೂ ನಾಯಕನನ್ನೇ ನಿರ್ಬಂಧಿಸುವ ಮೂಲಕ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
PublicNext
30/07/2022 07:48 am