ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಬ್ ದಾಳಿ ದಾರಿ ತಪ್ಪಿದ ಯುವಕರ ಹಫ್ತಾ ವಸೂಲಿ ತಂತ್ರ; ಯು.ಟಿ.ಖಾದರ್ ಕಿಡಿ

ಮಂಗಳೂರು: ನಗರದ ಬಲ್ಮಠದಲ್ಲಿ ನಿನ್ನೆ ನಡೆದ ಪಬ್ ದಾಳಿ, ದಾರಿ ತಪ್ಪಿದ ಯುವಕರು ಹಫ್ತಾ ವಸೂಲಿಗಾಗಿ ಮಾಡಿರುವ ತಂತ್ರ ಎಂದು ಬಜರಂಗದಳದ ಕಾರ್ಯಕರ್ತರ ವಿರುದ್ಧ ವಿಧಾನಸಭೆ ವಿಪಕ್ಷ ಉಪನಾಯಕ, ಉಳ್ಳಾಲ ಶಾಸಕ ಯು‌.ಟಿ.ಖಾದರ್ ಗಂಭೀರ ಆರೋಪ ಮಾಡಿದ್ದಾರೆ.

ನಿನ್ನೆ ರಾತ್ರಿ ಮಂಗಳೂರಿನಲ್ಲಿ ನಡೆದ ಪಬ್ ದಾಳಿ ವಿಚಾರದಲ್ಲಿ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕಿಡಿಕಾರಿದ ಖಾದರ್, ಈ ಸಮಾಜಘಾತುಕ ಶಕ್ತಿಗಳು ವ್ಯಾಪಾರಸ್ಥರನ್ನು ಹಫ್ತಾಕ್ಕಾಗಿ ಬೆದರಿಸುತ್ತದೆ. ಈ ಎಲ್ಲಾ ಘಟನೆಗಳಿಗೆ ರಾಜ್ಯ ಸರ್ಕಾರ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರ ಆಕ್ಷನ್ ಗೆ ರಿಯಾಕ್ಷನ್ ಹೇಳಿಕೆಯೇ ಪ್ರೇರಣೆ ಎಂದರು.

ನಿನ್ನೆ ಪಬ್ ದಾಳಿ ಸಂದರ್ಭ ಅಲ್ಲಿದ್ದ ಯುವಕರು ಇದೇ ವಾಕ್ಯವನ್ನು ಹೇಳಿದ್ದರೆಂದು ತಿಳಿದು ಬಂದಿದೆ. ಇವರ ವಿರುದ್ಧ ರಾಜ್ಯ ಸರ್ಕಾರ ಯಾವ ಕಾರಣಕ್ಕೆ ಕ್ರಮ ಕೈಗೊಳ್ಳೋದಿಲ್ಲ. ಪಬ್ ಗೆ ಬಂದಿರುವ ಮಕ್ಕಳು ತಪ್ಪು ಮಾಡಿದ್ದಲ್ಲಿ ಅದನ್ನು ನೋಡಲು ಅವರ ಪೋಷಕರಿದ್ದಾರೆ. ಅದನ್ನು ಕೇಳಲು ಈ ಯುವಕರು ಯಾರು?

ಮಕ್ಕಳಿಗೆ ಜೋರು ಮಾಡಲು ಕಾನೂನಿನಲ್ಲಿ ಪೋಷಕರಿಗೇ ಅಧಿಕಾರವಿಲ್ಲ. ನಿನ್ನೆ ವಿದ್ಯಾರ್ಥಿಗಳಿಗೆ ಮಾನಸಿಕ ಹಲ್ಲೆ ಹಾಗೂ ನಿಂದನೆ ಮಾಡಲು ಇವರಿಗೆ ಅವಕಾಶ ನೀಡಿದ್ದು ಯಾರೆಂದು ಸರ್ಕಾರ ಜನರ ಮುಂದಿಡಬೇಕು. ವ್ಯಾಪಾರಿಗಳು, ಹೊಟೇಲ್ ಮಾಲಕರು ನೆಮ್ಮದಿಯಿಂದ ವ್ಯಾಪಾರ ಮಾಡುವಂತಾಗಬೇಕು. ಹಫ್ತಾಕ್ಕಾಗಿ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಒತ್ತಾಯಿಸಿದರು.

Edited By :
Kshetra Samachara

Kshetra Samachara

26/07/2022 09:21 pm

Cinque Terre

9.22 K

Cinque Terre

3

ಸಂಬಂಧಿತ ಸುದ್ದಿ