ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿಗೆ ತುಳು ಸಿನಿಮಾ, ನಾಟಕಗಳಲ್ಲಿ ಗಣನೀಯ ಕೆಲಸ ಮಾಡಿರುವ ಕೃಷ್ಣಪ್ಪ ಉಪ್ಪೂರು, ತುಳು ಪಾಡ್ದನ ಗಾಯಕ ಸಂಜೀವ ತಲಪಾಡಿ, ಶಿಶು ಸಾಹಿತಿ, ತುಳು ಸಾಹಿತಿ ಉಲ್ಲಾಸ್ ಕೃಷ್ಣ ಪೈಯವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ತಲಾ 50 ಸಾವಿರ ರೂ., ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಸ್ಮರಣೆಯನ್ನು ಒಳಗೊಂಡಿದೆ.
ಈ ಬಗ್ಗೆ ನಗರದ ಪ್ರೆಸ್ ಕ್ಲಬ್‌ನಲ್ಲಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಮಾತನಾಡಿ, ಇದೇ ಸಂದರ್ಭ 2021ನೇ ಸಾಲಿನಲ್ಲಿ ಪುಸ್ತಕ ಬಹುಮಾನ ಯೋಜನೆಯಲ್ಲಿ ಮೂರು ಬೇರೆ ಬೇರೆ ವಿಭಾಗಗಳ ತಲಾ ಒಂದು ಪುಸ್ತಕವನ್ನು ಬಹುಮಾನ ನೀಡುವ ಉದ್ದೇಶದಿಂದ ತೀರ್ಪುಗಾರರ ಮೂಲಕ ಆಯ್ಕೆ ಮಾಡಲಾಗಿದೆ. ಕವನ ವಿಭಾಗದಲ್ಲಿ ಯೋಗೀಶ್ ಕಾಂಚನ್ ಅವರ 'ತಂಞಣ ಬೊಳ್ಳಿ', ನಾಟಕ ವಿಭಾಗದಲ್ಲಿ ಅಕ್ಷತರಾಜ್ ಪೆರ್ಲ ಅವರ 'ಬೇಲಿ ಸಾಪೊದ ಕಣ್ಣ್' ಹಾಗೂ ಅಧ್ಯಯನ ವಿಭಾಗದಲ್ಲಿ ಡಾ.ಅಶೋಕ ಆಳ್ವ ಅವರ 'ತುಳುನಾಡಿನ ಪ್ರಾಣಿ ಜನಪದ' ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ. ಈ ಪ್ರಶಸ್ತಿ 25 ಸಾವಿರ ರೂ., ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಸ್ಮರಣೆಯನ್ನು ಒಳಗೊಂಡಿದೆ ಎಂದರು.
ಅದೇ ರೀತಿ ಬಾಲ ಪ್ರತಿಭಾ ಪುರಸ್ಕಾರ, ಯುವ ಸಾಧಕ ಪುರಸ್ಕಾರ, ಮಾಧ್ಯಮ ಪುರಸ್ಕಾರ, ಸಂಘಟನಾ ಪುರಸ್ಕಾರ ವಿಭಾಗದಲ್ಲಿ ಹಲವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ತಲಾ 10 ಸಾವಿರ ರೂ., ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಸ್ಮರಣೆಯನ್ನು ಒಳಗೊಂಡಿದೆ.
ಐಕಾನ್-
Kshetra Samachara
22/07/2022 01:33 pm