ಮಂಗಳೂರು: ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಇರಲಿ, ಇಬ್ಬರನ್ನೂ ಮುಖ್ಯಮಂತ್ರಿ ಮಾಡುವುದು ಕಾಂಗ್ರೆಸ್ ಪಕ್ಷದ ಶಾಸಕರು ಎಂದು ಮಂಗಳೂರಿನಲ್ಲಿ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರೋ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಅವರು,
ಆಯ್ಕೆಯಾಗುವ ಶಾಸಕರು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ. ಶಾಸಕರಲ್ಲಿ ಅಭಿಪ್ರಾಯಗಳನ್ನು ತಿಳ್ಕೊಂಡು ಸೋನಿಯಾ ಗಾಂಧಿ ತೀರ್ಮಾನ ಮಾಡ್ತಾರೆ. ಇದು ಕಾಂಗ್ರೆಸ್ ನಲ್ಲಿ ಬಹಳ ವರ್ಷಗಳಿಂದ ಬಂದಿರುವ ಸಂಪ್ರದಾಯ. ಅದನ್ನೇ ಮುಂದೆಯೂ ಪಕ್ಷ ಮುಂದುವರಿಸಿಕೊಂಡು ಹೋಗುತ್ತದೆ. ಎಲ್ಲಾ ಜಾತಿ ಧರ್ಮದವರು ಅಧಿಕಾರವನ್ನು ತೆಗೆದುಕೊಂಡು ಜನಸಾಮಾನ್ಯರಿಗೆ ಅನುಕೂಲ ಮಾಡುತ್ತಾರೆ ಎಂದರು.
ಇನ್ನೂ ಕನಸನ್ನು ಎಲ್ಲರೂ ಸಹ ಕಾಣುತ್ತಾರೆ, ಅದರಲ್ಲಿ ಏನೂ ಇಲ್ಲ ಜಾತಿ ಇಟ್ಕೊಂಡು ಜಾತಿ ಸಂಘಟನೆ ಕಟ್ಟಬಹುದು, ರಾಜಕೀಯ ಮಾಡಲು ಆಗಲ್ವಾ..? ಅವರಿಗೆಲ್ಲಾ ಅಷ್ಟೊಂದು ಶಕ್ತಿ ಇದ್ದರೆ ಅವರದ್ದೇ ಜಾತಿ ಹೆಸರಲ್ಲಿ ಸಂಘಟನೆಗಳನ್ನು, ಪಕ್ಷಗಳನ್ನ ಕಟ್ಟಿ ಮುಖ್ಯಮಂತ್ರಿ ಆಗಬೇಕು. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಎಲ್ಲಾ ಧರ್ಮದವರು ಎಲ್ಲಾ ಜಾತಿಯವರು. ಎಲ್ಲಾ ಭಾಷೆಯವರು, ಎಲ್ಲಾ ಪ್ರಾಂತ್ಯದವರು ಸೇರಿ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಕೊಡ್ತಾರೆ.
ಅದಕ್ಕೋಸ್ಕರ ಕಾಂಗ್ರೆಸ್ ಪಕ್ಷದ ತೀರ್ಮಾನ ಅಂತಿಮವಾದ ತೀರ್ಮಾನ. ಕಾಂಗ್ರೆಸ್ ನಾಯಕರಿಗಿಂತ ಹೆಚ್ಚಾಗಿ ಪಕ್ಷದ ಕಾರ್ಯಕರ್ತರು ತಿಳಿದುಕೊಂಡಿದ್ದಾರೆ. ಪಕ್ಷದಲ್ಲಿ ಕಾರ್ಯಕರ್ತರದ್ದೇ ಅಂತಿಮವಾದ ತೀರ್ಮಾನ ಆಗುತ್ತೆ. ಪಕ್ಷದಲ್ಲಿ ಪಕ್ಷ ತೀರ್ಮಾನ ಮಾಡಲು ಅಥವಾ ವ್ಯಕ್ತಿಗಳು ತೀರ್ಮಾನ ಮಾಡಲಿಕ್ಕೆ ಸಾಧ್ಯ ಇಲ್ಲ ಎಂದರು.
ಇನ್ನು ನಾನು ಮುಖ್ಯಮಂತ್ರಿ ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದ್ದವನು. ಆದ್ದರಿಂದ ಕಾಂಗ್ರೆಸ್ ಪಕ್ಷದ ಒಂದು ಪ್ರಾಕ್ಟೀಸ್ ಅಥವಾ ಸಂಪ್ರದಾಯವನ್ನು ಬಹಳ ಚೆನ್ನಾಗಿ ಫಾಲೋ ಮಾಡ್ತೀವಿ ಅಂದರು. ಬಿ.ಸಿ.ಪಾಟೀಲ್ ಯಾವ ನೈತಿಕತೆ ಇಟ್ಕೊಂಡು ಮಾತಾಡ್ತಾರೆ. ಅವರು ಉತ್ತರ ಕೊಡಬೇಕಾಗಿರೋದು ಯತ್ನಾಳ್ ಅವರ 2500 ಕೋಟಿ ಆರೋಪದ ಬಗ್ಗೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗ್ಬೇಕು ಅಂದ್ರೆ ಕೋಟಿ ಕೊಡಬೇಕು ಹೇಳಿದ್ದಾರೆ.
ಈ ವಲಸೆ ಗಿರಾಕಿಗಳ ಬಗ್ಗೆ ಮಾತನಾಡಲ್ಲ, ಪಕ್ಷಿ ಪ್ರಾಣಿಗಳು ವಲಸೆ ಹೋಗುತ್ತದೆ, ಸಿದ್ದರಾಮೋತ್ಸವವನ್ನು ಕಾಂಗ್ರೆಸ್ ಪಕ್ಷ ಮಾಡ್ತಾ ಇಲ್ಲ, ಅದು ಅವರ ಅಭಿಮಾನಿಗಳು ಮಾಡ್ತಾ ಇದ್ದಾರೆ ಎಂದು ಸಮಾಜಾಯಿಷಿ ನೀಡಿದರು.
PublicNext
20/07/2022 09:29 pm