ಪುತ್ತೂರು: ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಎಲ್ಲಾ ಪ್ರಯತ್ನಗಳು ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ನಡೆಯುತ್ತಿದ್ದು, ಭಾರತ ಹಿಂದೂ ರಾಷ್ಟ್ರವಾಗುವುದರಲ್ಲಿ ಯಾವುದೇ ಅನುಮಾನವೂ ಬೇಡ ಎಂದು ಸನಾತನ ಸಂಸ್ಥೆಯ ರಾಜ್ಯ ಸಂಯೋಜಕ ಗುರುಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ಮಾತನಾಡಿದ ಅವರು ಹಿಂದೂ ರಾಷ್ಟ್ರ ಎಂದ ತಕ್ಷಣ ದೇಶದಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ಭ್ರಮೆಯಿಂದ ಹೊರಬರಬೇಕಿದೆ. ದೇಶದ ಸಂಸ್ಕೃತಿ,ಪರಂಪರೆ, ಮಣ್ಣಿನ ಇತಿಹಾಸಕ್ಕೆ ಬೆಲೆಕೊಡುವ ಯಾವ ಜಾತಿ, ಧರ್ಮ, ಸಮುದಾಯದ ಜನರಿಗೂ ಹಿಂದೂ ರಾಷ್ಟ್ರದಲ್ಲಿ ಅವಕಾಶವಿದೆ. ಹಿಂದೂ ರಾಷ್ಟ್ರದ ಕಲ್ಪನೆಯೇ ಆದರ್ಶ ವ್ಯವಸ್ಥೆಯಾಗಿದೆ ಎಂದ ಅವರು ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂ ರಾಷ್ಟ್ರಕ್ಕೆ ಬೇಕಾದ ಎಲ್ಲಾ ಕಾನೂನುಗಳೂ ಬರುತ್ತಿವೆ.
ರಾಮಮಂದಿರ, 370 ಆರ್ಟಿಕಲ್ ಹಿಂತೆಗೆತ, ಮುಂದೆ ಗೋಹತ್ಯೆ ನಿಶೇಧ, ಮತಾಂತರ ನಿಶೇಧ ಕಾಯ್ದೆಗಳು ಜಾರಿಗೆ ತಯಾರಿ ನಡೆಯುತ್ತಿರುವುದು ಹಿಂದೂ ರಾಷ್ಟ್ರಕ್ಕೆ ಮುನ್ನುಡಿ ಎಂದರು. ಸನಾತನ ಸಂಸ್ಥೆ ಹಿಂದೂ ಹಬ್ಬಗಳ ಆಚರಣೆಯನ್ನು ಸಂಪ್ರದಾಯ ಪ್ರಕಾರವೇ ನಡೆಸಲು ಆಂದೋಲನವನ್ನು ಆರಂಭಿಸಿದ್ದು, ಗಣೇಶೋತ್ಸವ ಸೇರಿದಂತೆ ಎಲ್ಲಾ ಹಬ್ಬಗಳ ಆಚರಣೆಯಲ್ಲೂ ಪಾಶ್ಚಾತ್ಯ ಸಂಸ್ಕೃತಿಯಾದ ಡಿಜೆ ಮೊದಲಾದ ಕುಣಿತಗಳನ್ನು ನಿಲ್ಲಿಸುವುದು ಆಂದೋಲನದ ಮುಖ್ಯ ಉದ್ಧೇಶವಾಗಿದೆ ಎಂದರು.
Kshetra Samachara
11/07/2022 01:59 pm