ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಬಿಜೆಪಿ ಬ್ಯುಸಿನೆಸ್ ಜನತೆಯ ಪಾರ್ಟಿ; ಮಧು ಬಂಗಾರಪ್ಪ

ಬಂಟ್ವಾಳ: ಬಿಜೆಪಿ ನಾಯಕರು ದುಡ್ಡಲ್ಲಿ ರಾಜಕಾರಣ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಏನ್ ಮಾಡಿದ್ರು ಗೊತ್ತಾಯಿತಲ್ವಾ.? ಅದಕ್ಕೆ ನಾನು ಹೇಳ್ತಿರೋದು, ಭಾರತೀಯ ಜನತಾ ಪಾರ್ಟಿ ಬ್ಯುಸಿನೆಸ್ ಜನತೆಯ ಪಾರ್ಟಿಯಾಗಿದೆ. ಅಷ್ಟೇ ಅಲ್ಲದೆ ಭಯೋತ್ಪಾದನಾ ಪಾರ್ಟಿಯಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದ್ದಾರೆ.

ಬಂಟ್ವಾಳದ ಬಿಸಿ ರೋಡ್‌ನ ಶ್ರೀ ಬ್ರಹ್ಮನಾರಾಯಣ ಗುರು ಸಭಾ ಭವನದಲ್ಲಿ ನಡೆದ ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್‌ ಘಟಕಗಳಿಂದ ಹಿಂದುಳಿದ ವರ್ಗಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ತಂದೆ ( ಎಸ್.ಬಂಗಾರಪ್ಪ) ಬಿಜೆಪಿ ಸೇರಿದ ಒಂಬತ್ತು ತಿಂಗಳಲ್ಲಿ ಪಾರ್ಟಿ ಬಿಟ್ಟಿದ್ದರು ಎಂದರು.

ಬಿಜೆಪಿ ಸರಕಾರದ ಆಡಳಿತದ ಅವಧಿಯಲ್ಲಿ ಅರಣ್ಯ ಜಮೀನಿನಲ್ಲಿ ಕೃಷಿ ಮಾಡುವವರಿಗೆ ನೀವು ಕಳ್ಳರು ಎಂಬ ನೋಟೀಸ್ ಜಾರಿ ಮಾಡಲಾಗಿದ್ದನ್ನು ನೆನಪಿಸಿಕೊಳ್ಳಬೇಕು. ಹಿಂದುಳಿದ ವರ್ಗಗಳ ಹಾದಿ ತಪ್ಪಿಸುವ ಕೆಲಸವನ್ನು ಬಿಜೆಪಿ ಪಕ್ಷದವರು ಮಾಡಿದ ಪರಿಣಾಮ ಅನೇಕ ಯುವಕರು ಇಂದಿಗೂ ಜೈಲಿನಲ್ಲಿ ಜೀವನ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪಷ್ಟವಾದ ಬಹುಮತದಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಯಾವುದೇ ಕ್ಷಣದಲ್ಲಿ ಚುನಾವಣೆ ಬಂದರೂ ಬಡ್ಡಿ ಸಮೇತ ತೀರಿಸಿಕೊಳ್ಳಲು ಕಾಂಗ್ರೆಸ್‌ ಕಾರ್ಯಕರ್ತರು ಒಂದಾಗಿ 2023ಕ್ಕೆ ಕಾಂಗ್ರೇಸ್ ಅಧಿಕಾರಕ್ಕೆ ತರಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ಬಿಜೆಪಿಯವರು ದ್ರೋಹ ಮಾಡಿದ್ದಾರೆ. ಬಿಜೆಪಿ ಈ ದೇಶಕ್ಕೆ, ರಾಜ್ಯಕ್ಕೆ ಹಿಂದುಳಿದ ವರ್ಗಕ್ಕೆ, ಬಡವರಿಗೆ ಅನ್ಯಾಯ ಮಾಡಿದ ಪಕ್ಷ ಎಂದು ಕಿಡಿಕಾರಿದ್ದಾರೆ.

Edited By :
Kshetra Samachara

Kshetra Samachara

05/07/2022 11:10 am

Cinque Terre

6.46 K

Cinque Terre

0

ಸಂಬಂಧಿತ ಸುದ್ದಿ