ಕೋಟ: ರಾಜಸ್ಥಾನದ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಉಡುಪಿ ಜಿಲ್ಲೆಯ ಕುಂದಾಪುರದ ಕೋಟದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಗೆ ಮುನ್ನ ಕೋಟ ಮೀನು ಮಾರುಕಟ್ಟೆಯಿಂದ ಕೋಟ ಬಸ್ ನಿಲ್ದಾಣದವರೆಗೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು, ಕೊಲೆಗಾರರ ವಿರುದ್ಧ ಘೋಷಣೆ ಕೂಗುತ್ತಾ ಬೃಹತ್ ಮೆರವಣಿಗೆ ನಡೆಸಿದರು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಮುಖಂಡ ನವೀನಚಂದ್ರ ಉಪ್ಪುಂದ, ದೇಶದಾದ್ಯಂತ ಮುಸ್ಲಿಂ ಜಿಹಾದಿಗಳ ಅಟ್ಟಹಾಸ ಮೇರೆ ಮೀರಿದೆ. ರಾಜಸ್ಥಾನದ ಬಡ ಕುಟುಂಬದ ಟೈಲರ್ ಕನ್ಹಯ್ಯ ಲಾಲ್ ಈ ಅಟ್ಟಹಾಸಕ್ಕೆ ಇತ್ತೀಚಿಗೆ ಬಲಿಯಾದ ದುರ್ದೈವಿ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಮುಸ್ಲಿಮರ ಈ ಕುತಂತ್ರ ರಾಜಕಾರಣಿಗಳ ತುಷ್ಟೀಕರಣ ನೀತಿಯಿಂದಾಗಿ ಈಗ ಹೆಚ್ಚಿದೆ, ಹಿಂದೂಗಳನ್ನು ಗುರುತಿಸಿ ಹತ್ಯೆ ಮಾಡುವ ಸರಣಿ ಮುಂದುವರೆದಿದೆ.
ಈ ಅನಿಷ್ಟ ಪದ್ಧತಿ ಇಲ್ಲಿಗೆ ಕೊನೆಯಾಗಬೇಕು ಶಿವಮೊಗ್ಗದ ಹರ್ಷ, ರಾಜಸ್ಥಾನದ ಕನ್ಹಯ್ಯ ಲಾಲ್ ಇನ್ನಿತರ ಹಿಂದೂ ಬಾಂಧವರ ಹಂತಕ ಜಿಹಾದಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದರು.
Kshetra Samachara
01/07/2022 09:03 pm