ಉಳ್ಳಾಲ: ಬಿಜೆಪಿಗರೆ ನಿಮ್ಮ ಮಕ್ಕಳನ್ನ ವಿದೇಶದಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಓದಿಸುವುದನ್ನು ಬಿಟ್ಟು ಅಗ್ನಿಪಥಕ್ಕೆ ಕಳುಹಿಸಿ, ರೈತರ, ಬಡವರ ಮಕ್ಕಳನ್ನು ಈ ಯೋಜನೆಗೆ ಬಲಿ ಕೊಡಬೇಡಿ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಹೇಳಿದ್ದಾರೆ.
ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಳ್ಳಾಲ ಹಾಗೂ ಮುಡಿಪು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಬೆಲೆ ಏರಿಕೆ, ಕೇಂದ್ರ ಹಾಗೂ ರಾಜ್ಯ ಸರಕಾರ ಆಡಳಿತದಲ್ಲಿ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ತೊಕ್ಕೊಟ್ಟು ಫ್ಲೈ ಓವರ್ ಕೆಳಗಡೆ ಮಂಗಳವಾರ ನಡೆದ ಪ್ರತಿಭಟನೆ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರಕಾರ ದೇಶದ ಮಿಲಿಟರಿ ವ್ಯವಸ್ಥೆಯನ್ನು ಅಗ್ನಿಪಥ್ ಯೋಜನೆ ತರುವ ಮೂಲಕ ಹಾಳುಗೆಡವಲು ಮುಂದಾಗಿದೆ.ಇಂದು ಮಹಿಳೆಯರು ದೇಶದ ರೈತರು,ಯೋಧರು,ಬಡವರ್ಗದ ಪರವಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ ಎಂದರು.
ಉಳ್ಳಾಲ ನಗರಸಭೆಯ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಕೌನ್ಸಿಲರ್‌ಗಳಾದ ಸಪ್ನ ಹರೀಶ್, ಭಾರತಿ, ವೀಣಾ ಶಾಂತಿ ಡಿಸೋಜ,ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಸುರೇಖ ಚಂದ್ರಹಾಸ್ ಮೊದಲಾದವರು ಇದ್ದರು.
Kshetra Samachara
28/06/2022 10:06 pm