ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲದ ರಸ್ತೆ ಬದಿ ಸಾವಿರಕ್ಕೂ ಅಧಿಕ ಸಸಿ ನೆಡುವ ಯೋಜನೆ:ಶಾಸಕ ಯು.ಟಿ ಖಾದರ್

ಉಳ್ಳಾಲ: ಮಂಗಳೂರು ವಿದಾನಸಭಾ ಕ್ಷೇತ್ರದ ರಸ್ತೆ ಬದಿಗಳಲ್ಲಿ‌ ಸಾವಿರಕ್ಕೂ ಅಧಿಕ ಸಸಿಗಳನ್ನ ನೆಡುವ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.

ಕುದ್ರೋಳಿಯ ಗುರು ಬೆಳದಿಂಗಳು ಸಂಘಟನೆ ಹಾಗೂ ಮಂಗಳೂರು ಅರಣ್ಯ ವಲಯದ ಜಂಟಿ ಆಶ್ರಯದಲ್ಲಿ ಉಳ್ಳಾಲದ ರಾಜರಸ್ತೆಯಲ್ಲಿ ಸಾಲು ಮರ ಯೋಜನೆ ಹಮ್ಮಿಕೊಳ್ಳಲಾಗಿದ್ದು ರಾಣಿ ಅಬ್ಬಕ್ಕ ವೃತ್ತದಲ್ಲಿ ಯೋಜನೆಗೆ ಅವರು ಚಾಲನೆ ನೀಡಿ ಮಾತನಾಡಿದರು.

ಉಳ್ಳಾಲದ ಅಬ್ಬಕ್ಕ ಸರ್ಕಲ್ ನಿಂದ ಕೋಟೆಪುರದವರೆಗೆ ಚತುಷ್ಪತ ರಸ್ತೆ ನಿರ್ಮಾಣವಾಗಲಿದ್ದು ರಸ್ತೆಯುದ್ದಕ್ಕೂ ಹಸಿರು ಬೆಳೆಸುವ ಯೋಜನೆಯಿದೆ.ಹಸಿರು ಕ್ರಾಂತಿ ಪ್ರಸ್ತುತ ಕಾಲ ಘಟ್ಟದಲ್ಲಿ ಅನಿವಾರ್ಯವಾಗಿದ್ದು ಗುರು ಬೆಳದಿಂಗಳು ನಂತಹ ಸಂಘಟನೆಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದರು.

ಗುರು ಬೆಳದಿಂಗಳು ಕುದ್ರೋಳಿ ಇದರ ಸಂಚಾಲಕ, ವಕೀಲರಾದ ಪದ್ಮರಾಜ್, ಮಂಗಳೂರು ಉಪ ವಲಯ ಅರಣ್ಯಾಧಿಕಾರಿ ಶ್ರೀ ಮಹಾಬಲ ಡಿ. ಎಸ್.ಅರಣ್ಯ ರಕ್ಷಕಿ ಸೌಮ್ಯ,ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ,ರಾಜ್ಯ ಅರಣ್ಯ ಮಿತ್ರ ಪ್ರಶಸ್ತಿ ವಿಜೇತ ಮಾಧವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

26/06/2022 03:56 pm

Cinque Terre

2.41 K

Cinque Terre

0

ಸಂಬಂಧಿತ ಸುದ್ದಿ