ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಾಂಗ್ರೆಸ್ ನವ ಸಂಕಲ್ಪ ಶಿಬಿರ: ವೀರಪ್ಪಮೊಯಿಲಿ, ಧ್ರುವನಾರಾಯಣ ಕ್ಲಾಸ್ !

ಉಡುಪಿ: ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಉಡುಪಿ, ಕುಂದಾಪುರ, ಬೈಂದೂರು ಕ್ಷೆತ್ರವನ್ನು ಕಾಂಗ್ರೆಸ್ ಗೆದ್ದಿತ್ತು. ಇದು ಕಾಂಗ್ರೆಸ್‌ನ ಇತಿಹಾಸ. ಈ ಇತಿಹಾಸ ಭವಿಷ್ಯಕ್ಕೆ ಮುನ್ನಡಿಯಾಗಬೇಕು. ಬೂತ್ ಮಟ್ಟದ ಕಾರ್ಯಕರ್ತರಿಗೆ ಬೂತ್‌ನ ಅಧ್ಯಕ್ಷರು ಸಲಹೆ ಸೂಚನೆಗಳನ್ನು ನೀಡುವ ಮೂಲಕ ಪಕ್ಷವನ್ನು‌ ಮತ್ತೆ ಕಟ್ಟಿ ನಿಲ್ಲಿಸಬೇಕು ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿದರು.

ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ನಗರದ ಅಮೃತ್ ಗಾರ್ಡ್‌ನಲ್ಲಿ ಹಮ್ಮಿಕೊಳ್ಳಲಾದ ನವ ಸಂಕಲ್ಪ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ತಮ್ಮ ತಮ್ಮ ಬೂತ್ ಮಟ್ಟದ ಕಾರ್ಯಕರ್ತರು ಇಂದಿನಿಂದಲೇ ಶಪಥ ಮಾಡಿ ಕಾರ್ಯಕರ್ತರನ್ನು ಚುರುಕುಗೊಳಿಸಬೇಕು. ಈ ಬಾರಿ ನಾವು ಗೆದ್ದೇ ಗೆಲ್ಲಬೇಕು. ಅದಕ್ಕಾಗಿ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕು ಎಂದರು.

ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ ಮಾತನಾಡಿ, ಇಂತಹ ಶಿಬಿರಗಳು ಪಕ್ಷದ ಬಲವರ್ಧನೆಗೆ ಸಹಾಯಕವಾಗುತ್ತವೆ. ಈಗಾಗಲೇ ಸಿದ್ದರಾಮಯ್ಯನವರು ಚಿಂತನಾ ಶಿಬಿರವನ್ನು ಉದ್ಘಾಟಿಸಿ ಅಲ್ಲಿ ಕಾರ್ಯಕರ್ತರಿಗೆ ಸಲಹೆ ಸೂಚನೆಯನ್ನು ನೀಡಿದ್ದಾರೆ. ಅದರಂತೆ ಚಿಂತನಾ ಶಿಬಿರದಲ್ಲಿ ಪಾಲ್ಗೊಂಡು ಸಲಹೆ ಸೂಚನೆಯನ್ನು ನಾವೆಲ್ಲ ಪಡೆಯಬೇಕಾಗಿದೆ. ಇಂತಹ ಚಿಂತನ ಶಿಬಿರ ನಡೆಸುವುದರಿಂದ ಪಕ್ಷದ ಬಲವರ್ಧನೆಗೆ ಸಹಕಾರಿ ಎಂದರು.

ಶಿಬಿರದಲ್ಲಿ ಕಾಂಗ್ರೆಸ್ ನ ಜಿಲ್ಲಾ ಉಸ್ತುವಾರಿಗಳಾದ ಅಭಯಚಂದ್ರ ಜೈನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಧಾನ ಕಾರ್ಯದರ್ಶಿಗಳಾದ ಎಮ್ಎ ಗಫೂರ್, ಉಡುಪಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ ಮಿಥುನ್ ರೈ, ಮಮತಾ ಗಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

24/06/2022 06:45 pm

Cinque Terre

4.4 K

Cinque Terre

0

ಸಂಬಂಧಿತ ಸುದ್ದಿ