ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರೋಹಿತ್ ಚಕ್ರತೀರ್ಥರಿಗೆ ನಾಗರಿಕ ಸನ್ಮಾನ ಬೇಡ, ಕುಲಪತಿಗಳು ಕಾರ್ಯಕ್ರಮದಿಂದ ಹಿಂದೆ ಸರಿಯಲಿ: ಮುನೀರ್ ಕಾಟಿಪಳ್ಳ ಆಗ್ರಹ

ಮಂಗಳೂರು: ನಾಡಗೀತೆಗೆ, ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥರಿಗೆ ಮಂಗಳೂರಿನಲ್ಲಿ ನಾಗರಿಕ ಸನ್ಮಾನ ನಡೆಸುತ್ತಿರುವುದು ಆಘಾತಕಾರಿ. ಈ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಪತಿ ಡಾ. ಪಿ.ಎಸ್‌ ಯಡಪಡಿತ್ತಾಯ ಹಾಗೂ ಶಾಸಕ ವೇದವ್ಯಾಸ ಕಾಮತ್ ಭಾಗವಹಿಸುತ್ತಿರುವುದು ಸರಿಯಲ್ಲ. ತಕ್ಷಣ ಅವರು ಈ ಕಾರ್ಯಕ್ರಮದಿಂದ ಹಿಂದೆ ಸರಿಯಲಿ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

ಚಿಂತನಗಂಗಾ ವೇದಿಕೆಯ ವತಿಯಿಂದ ಜೂನ್ 25ರಂದು ನಗರದಲ್ಲಿ ರೋಹಿತ್ ಚಕ್ರತೀರ್ಥರಿಗೆ ನಾಗರಿಕ ಸನ್ಮಾನ ಮಾಡಲಾಗುತ್ತಿದೆ. ಈ ಬಗ್ಗೆ ಕಿಡಿ ಕಾರಿದ ಮುನೀರ್ ಕಾಟಿಪಳ್ಳ, ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡುವುದಕ್ಕೆ ನಮ್ಮದೇನು ತಕರಾರು ಇಲ್ಲ. ಆದರೆ ಕಯ್ಯಾರ ಕಿಂಞಣ್ಣ ರೈ, ಬಸವಣ್ಣ, ಕುವೆಂಪು, ನಾರಾಯಣ ಗುರುಗಳಿಗೆ ಅವಮಾನ ಎಸಗಿರುವವರಿಗೆ ನಾಗರಿಕ ಸನ್ಮಾನ ಮಾಡುತ್ತಿರುವುದು ಅಷ್ಟೊಂದು ಸರಿಯಲ್ಲ. ಅದರಲ್ಲಿಯೂ ಸಭಾಧ್ಯಕ್ಷತೆಯನ್ನು ಮಂಗಳೂರು ವಿವಿಯ ಕುಲಪತಿಯ ವಹಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ವಿಚಾರದಲ್ಲಿ ಮಾಡಿರುವ ಅಪಸವ್ಯ, ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಟ್ರೋಲ್ ಗಳು, ನಾಡಿನ ಖ್ಯಾತನಾಮರಿಗೆ ಮಾಡಿರುವ ಅವಮಾನದ ಬಗ್ಗೆ ಸಹಮತ ಇದೆಯೇ ಎಂದು ಕುಲಪತಿಯವರು ಸ್ಪಷ್ಟಪಡಿಸಲಿ. ಇಲ್ಲದಿದ್ದಲ್ಲಿ ಈ ಕಾರ್ಯಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ರೋಹಿತ್ ಚಕ್ರತೀರ್ಥರಿಗೆ ನಾಗರಿಕ ಸನ್ಮಾನ ಎಂಬ ಪದವನ್ನು ತೆಗೆದು ಹಾಕಲಿ. ಕುಲಪತಿಯವರು ಯಾವುದೇ ಕಾರಣಕ್ಕೂ ಭಾಗವಹಿಸಬಾರದು‌. ಅದನ್ನು ಮೀರಿಯೂ ಕಾರ್ಯಕ್ರಮ ನಡೆಸುವುದಾದಲ್ಲಿ ಕಾರ್ಯಕ್ರಮದ ಸಂದರ್ಭ ನಾವು ಪ್ರತಿಭಟನೆ ನಡೆಸಲಿದ್ದೇವೆ ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.

Edited By :
Kshetra Samachara

Kshetra Samachara

24/06/2022 03:17 pm

Cinque Terre

4.57 K

Cinque Terre

0

ಸಂಬಂಧಿತ ಸುದ್ದಿ